ಧೋತಿ ಮತ್ತು ಕುರ್ತಾ ಧರಿಸಿ ಕ್ರಿಕೆಟ್, ಸಂಸ್ಕೃತ ಕಾಮೆಂಟರಿ... ವಿಶೇಷ ಪಂದ್ಯಕ್ಕೆ ಸಾಕ್ಷಿಯಾಯ್ತು ಅಂಕುರ್ ಮೈದಾನ! - ವೇದ ಪರಿವರ್ ಸಮಿತಿ
🎬 Watch Now: Feature Video
ಭಾನುವಾರ ಭೂಪಾಲ್ನ ಅಂಕುರ್ ಮೈದಾನ ವಿಶೇಷ ಕ್ರಿಕೆಟ್ ಪಂದ್ಯಕ್ಕೆ ಸಾಕ್ಷಿಯಾಗಿದೆ. ಕ್ರಿಕೆಟಿಗರು ಧೋತಿ ಮತ್ತು ಕುರ್ತಾ ಧರಿಸಿ ಕ್ರಿಕೆಟ್ ಆಡಿದ್ದಾರೆ. ವಿಶೇಷವೆಂದರೆ ಪಂದ್ಯದ ಕಾಮೆಂಟರಿ ಸಂಸ್ಕೃತದಲ್ಲಿ ಮಾಡಲಾಯಿತು. ಸಂಸ್ಕೃತ ಭಾಷೆಯನ್ನು ಉತ್ತೇಜಿಸಲು ಈ ಪಂದ್ಯವನ್ನು ಆಯೋಜಿಸಲಾಗಿದೆ ಮತ್ತು ಹೆಚ್ಚು ಜನರು ಭಾಷೆಯನ್ನು ಕಲಿಯಬೇಕೆಂದು ಸಂಸ್ಥೆ ಬಯಸಿದೆ ಎಂದು ವೇದ ಪರಿವರ್ ಸಮಿತಿ ಅಧ್ಯಕ್ಷ ಪಂಡಿತ್ ಕಪಿಲ್ ಶರ್ಮಾ ಹೇಳಿದ್ದಾರೆ.