ಅಭಿಮಾನಿಗಳನ್ನು ನಿರಾಸೆ ಮಾಡಲಿಲ್ಲ ಕಿಚ್ಚ...ಪ್ರೀತಿಯಿಂದ ಎಲ್ಲರನ್ನೂ ಮಾತನಾಡಿಸಿದ ಸುದೀಪ್ - ದಬಾಂಗ್
🎬 Watch Now: Feature Video
ಅಭಿನಯ ಚಕ್ರವರ್ತಿ ಸುದೀಪ್ ಇಂದು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕೋಟಿಗೊಬ್ಬ-3, ದಬಾಂಗ್ ಶೂಟಿಂಗಿಗಾಗಿ ಹೈದರಾಬಾದ್ ತೆರಳಿದ್ದ ಸುದೀಪ್ ಅಭಿಮಾನಿಗಳಿಗಾಗಿ ಬೆಂಗಳೂರಿಗೆ ಬಂದಿದ್ದಾರೆ. ಬ್ಯುಸಿ ಕೆಲಸಗಳ ನಡುವೆಯೂ ತಮ್ಮನ್ನು ನೋಡಲು ಬಂದ ಅಭಿಮಾನಿಗಳಿಗೆ ನಿರಾಸೆ ಮಾಡದೆ ಎಲ್ಲರನ್ನೂ ಮಾತನಾಡಿಸಿದ್ದಾರೆ ಸುದೀಪ್. ದೂರದೂರುಗಳಿಂದ ಬಂದಿದ್ದ ಕಿಚ್ಚನ ಅಭಿಮಾನಿಗಳು ಮೆಚ್ಚಿನ ನಟನಿಗಾಗಿ ಹೂವು, ಕೇಕ್, ಗಿಫ್ಟ್ಗಳನ್ನು ತಂದಿದ್ದು ವಿಶೇಷವಾಗಿತ್ತು.