thumbnail

By

Published : Jan 10, 2020, 5:58 PM IST

ETV Bharat / Videos

ಇಂದು 'ಚಪಾಕ್​​​' ಬಿಡುಗಡೆ...ಸಿದ್ಧಿವಿನಾಯಕನ ಆಶೀರ್ವಾದ ಪಡೆದ ದೀಪಿಕಾ

ದೀಪಿಕಾ ಪಡುಕೋಣೆ ಅಭಿನಯದ ಬಾಲಿವುಡ್ ಬಹುನಿರೀಕ್ಷಿತ ಚಿತ್ರ 'ಚಪಾಕ್​​' ಇಂದು ದೇಶಾದ್ಯಂತ ಬಿಡುಗಡೆಯಾಗಿದೆ. ಮೇಘನಾ ಗುಲ್ಜಾರ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. 2005 ರಲ್ಲಿ ದೆಹಲಿಯಲ್ಲಿ ನಡೆದ ನೈಜಘಟನೆ ಆಧರಿಸಿ ಸಿನಿಮಾ ತಯಾರಿಸಲಾಗಿದೆ. ದೀಪಿಕಾ ಈ ಸಿನಿಮಾದಲ್ಲಿ ಆ್ಯಸಿಡ್ ಬಾಧಿತೆಯಾಗಿ ಅಭಿನಯಿಸಿದ್ದಾರೆ. ದೀಪಿಕಾ ಪಡುಕೋಣೆ ಎರಡು ದಿನಗಳ ಹಿಂದೆ ಜೆಎನ್​​​ಯು ಕ್ಯಾಂಪಸ್​​​ಗೆ ಭೇಟಿ ನೀಡಿದಾಗಿನಿಂದ ಸಿನಿಮಾ ಬಗ್ಗೆ ಅಪಪ್ರಚಾರ ಆರಂಭವಾಗಿತ್ತು. ಇವೆಲ್ಲಾ ವಿಘ್ನಗಳ ನಡುವೆಯೂ ಸಿನಿಮಾ ಇಂದು ಬಿಡುಗಡೆಯಾಗಿದೆ. ಇನ್ನು ದೀಪಿಕಾ ಇಂದು ಮುಂಬೈನ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದು ಸಿನಿಮಾ ಬಿಡುಗಡೆಗೆ ಯಾವುದೇ ವಿಘ್ನ ಬಾರದಿರಲಿ ಎಂದು ಪ್ರಾರ್ಥಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.