ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಬೃಹತ್ ಹೆಬ್ಬಾವು : ವಿಡಿಯೋ - python found
🎬 Watch Now: Feature Video
ತುಮಕೂರು : ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಬೃಹತ್ ಹೆಬ್ಬಾವು ಜನರನ್ನು ಭಯಭೀತಗೊಳಿಸಿದ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿಂದು ನಡೆದಿದೆ.
ಬೃಹತ್ ಹೆಬ್ಬಾವನ್ನು ಕಂಡು ಗಾಬರಿಗೊಂಡ ಸಾರ್ವಜನಿಕರು ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಉರಗತಜ್ಞರಿಗೆ ಕರೆ ಮಾಡಿದ್ದಾರೆ.
ವಿಷಯ ತಿಳಿದ ತಕ್ಷಣ ತುಮಕೂರು ವನ್ಯಜೀವಿ ಉರಗ ಜಾಗೃತಿ ಸಂಸ್ಥೆಯ ತಜ್ಞ ದಿಲೀಪ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ಹೆಬ್ಬಾವನ್ನು ಸೆರೆಹಿಡಿದು, ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಕೊರಟಗೆರೆ ಪಟ್ಟಣದ ಹೊರವಲಯದ ಡಿಗ್ರಿ ಕಾಲೇಜ್ ಸಮೀಪ ಕಾಣಿಸಿಕೊಂಡ ಬೃಹತ್ ಹೆಬ್ಬಾವು, ಟೀ ಅಂಗಡಿಯ ಮುಂಭಾಗದಲ್ಲಿರುವ ಕಲ್ಲುಗಳ ಅಡಿಯಲ್ಲಿ ಸೇರಿಕೊಂಡಿತ್ತು. ಇಲ್ಲಿ ಸುಮಾರು 10 ವರ್ಷದಿಂದ ಅನೇಕ ಭಾಗಗಳಲ್ಲಿ ಬೃಹತ್ ಗಾತ್ರದ ಹಾವುಗಳು ಕಾಣಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.
30 ಕೆ. ಜಿ ತೂಕದ ಹೆಬ್ಬಾವು ಸೆರೆ : ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ನರಿಗಿನ ಕೆರೆ ಗ್ರಾಮದ ಮನೆಯೊಂದರ ಹಿತ್ತಲಿನಲ್ಲಿ ಕಾಣಿಸಿಕೊಂಡ 9 ಅಡಿ ಉದ್ದದ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿ (ಸೆ-14-24) ಸೆರೆ ಹಿಡಿದು, ಗಂಗವ್ವ ಸರ ಮೀಸಲು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದರು.
ಇದನ್ನೂ ಓದಿ : ದಾವಣಗೆರೆ: 9 ಅಡಿ ಉದ್ದ, ಬರೋಬ್ಬರಿ 30 ಕೆ.ಜಿ. ತೂಕದ ಹೆಬ್ಬಾವು ಸೆರೆ - ವಿಡಿಯೋ - python Rescued