ಸಹಪಾಠಿ ಜೊತೆ ವಾಗ್ವಾದಕ್ಕಿಳಿದ ವಿದ್ಯಾರ್ಥಿ.. ಇಬ್ಬರ ಜಗಳ ಕೊಲೆಯಲ್ಲಿ ಅಂತ್ಯ! - ಹರಿಯಾಣದಲ್ಲಿ ಸಹಪಾಠಿಯಿಂದ ವಿದ್ಯಾರ್ಥಿ ಸಾವು
🎬 Watch Now: Feature Video
ಹರಿಯಾಣದ ಕರ್ನಲ್ ಜಿಲ್ಲೆಯ ಹರಸಿಂಗಪುರ ಗ್ರಾಮದ ಸಂಸ್ಕಾರ ಭಾರತಿ ಖಾಸಗಿ ಶಾಲಾ - ಕಾಲೇಜ್ನಲ್ಲಿ 12ನೇ ತರಗತಿಯಲ್ಲಿ ಓದುತ್ತಿರುವ ಶುಭಂ ಮತ್ತು ವೀರೇನ್ ಮಧ್ಯೆ ಹಳೆ ದ್ವೇಷ ಹಿನ್ನೆಲೆ ವಾಗ್ವಾದ ಶುರುವಾಗಿದೆ. ಇಬ್ಬರ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, ವೀರೇನ್‌ಗೆ ಶುಭಂ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಕೂಡಲೇ ನೆರೆದಿದ್ದ ವಿದ್ಯಾರ್ಥಿಗಳು ವೀರೇನ್‌ಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ವೀರೇನ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಈ ಸಂಪೂರ್ಣ ಘಟನೆ ಶಾಲಾ ಕಾಲೇಜ್ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ಘಟನೆ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
Last Updated : Feb 3, 2023, 8:20 PM IST