ಕಾರು ಅಪಘಾತ: ವೈಎಸ್ಆರ್ಸಿಪಿ ಎಂಎಲ್ಸಿ ಪರ್ವತ ರೆಡ್ಡಿಗೆ ಗಂಭೀರ ಗಾಯ, ಪಿಎ ಸಾವು - ಆಂಧ್ರಪ್ರದೇಶ
🎬 Watch Now: Feature Video
Published : Jan 5, 2024, 11:19 AM IST
|Updated : Jan 5, 2024, 12:05 PM IST
ನೆಲ್ಲೂರು (ಆಂಧ್ರಪ್ರದೇಶ): ಕೊಡವಲೂರು ಮಂಡಲದ ರೇಗಡಿಚೇಲಕ ಎಂಬಲ್ಲಿ ಗುರುವಾರ ತಡರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ವೈಎಸ್ಆರ್ಸಿಪಿ ಎಂಎಲ್ಸಿ ಪರ್ವತ ರೆಡ್ಡಿ ಚಂದ್ರಶೇಖರ್ ರೆಡ್ಡಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಲ್ಲಿ ಎಂಎಲ್ಸಿ ಅವರ ಪಿಎ ವೆಂಕಟೇಶ್ವರಲು ಎಂಬುವರು ಮೃತರಾಗಿದ್ದಾರೆ.
ಘಟನೆ ವಿವರ: ಪರ್ವತ ರೆಡ್ಡಿ ತಮ್ಮ ಕಾರಿನಲ್ಲಿ ವಿಜಯವಾಡದಿಂದ ನೆಲ್ಲೂರಿಗೆ ಹೋಗುತ್ತಿದ್ದರು. ಇವರ ಕಾರಿನ ಮುಂದೆ ಲಾರಿಯೊಂದು ಸಂಚರಿಸುತ್ತಿತ್ತು. ಏಕಾಏಕಿ ಚಕ್ರ ಪಂಕ್ಚರ್ ಆಗಿದ್ದರಿಂದ ಲಾರಿಯ ನಿಧಾನವಾಗಿ ಚಲಿಸಿದೆ. ಈ ವೇಳೆ ಪರ್ವತ ರೆಡ್ಡಿ ಅವರಿದ್ದ ಕಾರು ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದು, ಡಿವೈಡರ್ ಮೇಲೆ ಪಲ್ಟಿಯಾಗಿ ಬಿದ್ದಿದೆ. ಪರಿಣಾಮ ಪರ್ವತ ರೆಡ್ಡಿ ಅವರ ಪಿಎ ಸ್ಥಳದಲ್ಲೇ ಸಾವನ್ನಪ್ಪಿದ್ದು, ಎಂಎಲ್ಸಿ ತಲೆಗೆ ಗಂಭೀರ ಗಾಯಗಳಾಗಿದೆ. ಘಟನೆ ವೇಳೆ ಕಾರಿನಲ್ಲಿ ಒಟ್ಟೂ ಐವರು ಇದ್ದರು ಎಂದು ವರದಿಯಾಗಿದೆ. ಸದ್ಯ ಪರ್ವತ ರೆಡ್ಡಿ ಹಾಗೂ ಇತರ ಎಲ್ಲ ಗಾಯಾಳುಗಳನ್ನು ನೆಲ್ಲೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ತಿರುವಿನಲ್ಲಿ ಕಾರಿನ ಮೇಲೆ ಲಾರಿ ಪಲ್ಟಿ: ಮಗು ಸೇರಿ ನಾಲ್ವರು ಸಾವು, ವೃದ್ಧೆ ಪಾರು