ಹುಬ್ಬಳ್ಳಿಗೆ ಬಂದ ಮೋದಿಗೆ ಮಮತೆಯ ಕಲಾಕೃತಿ ಅರ್ಪಿಸಲು ಮುಂದಾದ ಯುವತಿ - portrait presentation to PM Modi
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17466062-thumbnail-3x2-meg.jpg)
ಹುಬ್ಬಳ್ಳಿ: ಯುವಜನೋತ್ಸವಕ್ಕೆ ಆಗಮಿಸುತ್ತಿರುವ ಮೋದಿಯವರಿಗೆ ಸ್ವಾಗತಕೋರಲು ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಹುಬ್ಬಳ್ಳಿ ಧಾರವಾಡ ಜನರು ವಿನೂತನ ರೀತಿಯಲ್ಲಿ ಸಿದ್ಧತೆ ಮಾಡಿದ್ದಾರೆ. ಅದರೊಂದಿಗೆ ಯುವತಿಯೊಬ್ಬಳು ವಿಶಿಷ್ಟ ರೀತಿಯ ನೆನಪಿನ ಕಾಣಿಕೆ ನೀಡಲು ಮುಂದಾಗಿದ್ದಾರೆ. ಹುಬ್ಬಳ್ಳಿಯ ಶ್ರೇಯಾ ಎಂಬವರು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅವರ ತಾಯಿ ಹೀರಾಬೇನ್ ಅವರ ಪೋರ್ಟ್ರೈಟ್ ಬಿಡಿಸುವ ಮೂಲಕ ವಿನೂತನ ರೀತಿಯಲ್ಲಿ ಅರ್ಪಣೆ ಮಾಡಲು ಸಿದ್ಧತೆ ಮಾಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಹುಬ್ಬಳ್ಳಿಗೆ ಆಗಮಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾವಚಿತ್ರ ನೀಡುವ ಮೂಲಕ ಪ್ರಶಂಸೆಗೆ ಪಾತ್ರವಾಗಿದ್ದ ಶ್ರೇಯಾ ಈಗ ಇಂತಹದೊಂದು ಮನಮೋಹಕ ಕಲಾಕೃತಿ ಸಮರ್ಪಣೆ ಮಾಡಲು ಮುಂದಾಗಿದ್ದಾರೆ.
Last Updated : Feb 3, 2023, 8:38 PM IST