ಕಾರವಾರ: ಬಸ್ ಚಾಲಕ, ನಿರ್ವಾಹಕನ ಮೇಲೆ ಯುವಕನಿಂದ ಹಲ್ಲೆ - ETv Bharat kannada news
🎬 Watch Now: Feature Video
ಕಾರವಾರ: ಬೈಕ್ ಸವಾರನೋರ್ವ ಕರ್ತವ್ಯದಲ್ಲಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಹೊನ್ನಾವರ ತಾಲೂಕಿನ ಟೊಂಕಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಬಸ್ ಚಾಲಕ ಕೃಷ್ಣಾ ನಾಯ್ಕ, ನಿರ್ವಾಹಕ ಮರಿಯಪ್ಪ ಹಲ್ಲೆಗೊಳಗಾಗಿದ್ದಾರೆ. ಟೊಂಕಾ ಬಳಿ ಓವರ್ ಟೇಕ್ ಮಾಡಲು ಹೋಗಿದ್ದ ಬೈಕ್ ಸವಾರನಿಗೆ ಬಸ್ ಅಡ್ಡಿಯಾದ ಕಾರಣ ಬಸ್ ನಿಲ್ಲಿಸಿ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಕರ್ತವ್ಯನಿರತ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಯುವಕನನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
Last Updated : Feb 3, 2023, 8:37 PM IST