ಪಂಚರತ್ನ ರಥಯಾತ್ರೆ: ಸ್ಟೀಲ್ ಬಿಂದಿಗೆಗಾಗಿ ಮುಗಿಬಿದ್ದ ಮಹಿಳೆಯರು.. ವಿಡಿಯೋ - ಈಟಿವಿ ಭಾರತ ಕನ್ನಡ
🎬 Watch Now: Feature Video
ಮಂಡ್ಯ: ಪಂಚರತ್ನ ರಥಯಾತ್ರೆ ವೇಳೆ ಸ್ಟೀಲ್ ಬಿಂದಿಗೆಗಾಗಿ ಮಹಿಳೆಯರು ಮುಗಿಬಿದ್ದ ಘಟನೆ ಕೆ.ಆರ್. ಪೇಟೆಯಲ್ಲಿ ನಡೆದಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆ ಕೆ.ಆರ್ ಪೇಟೆಗೆ ತಲುಪಿತ್ತು. ಈ ಸಂದರ್ಭದಲ್ಲಿ ಹೆಚ್ಡಿಕೆ ಪೂರ್ಣಕುಂಭ ಸ್ವಾಗತಕ್ಕೆ ಸ್ಟೀಲ್ ಬಿಂದಿಗೆ ತರಿಸಲಾಗಿತ್ತು. ಇದರಲ್ಲಿ ಉಳಿದ ಸ್ಟೀಲ್ ಬಿಂದಿಗೆಯನ್ನು ಮಹಿಳೆಯರಿಗೆ ಹಂಚಿದ್ದು, ಈ ವೇಳೆ ನಾ ಮುಂದು ತಾ ಮುಂದು ಎಂದು ಬಿಂದಿಗೆ ಪಡೆಯಲು ಮಹಿಳೆಯರು ಮುಗಿಬಿದ್ದಿದ್ದಾರೆ. ಈ ಸಂದರ್ಭ ಬಿಂದಿಗೆ ವಿತರಿಸಲಾಗದೇ ಜನರತ್ತ ಬಿಂದಿಗೆಗಳನ್ನು ಎಸೆಯುವ ದೃಶ್ಯ ಕಂಡುಬಂದಿದೆ. ಜೆಡಿಎಸ್ ಅಭ್ಯರ್ಥಿ ಮಂಜು ಅವರು ಕುಮಾರಸ್ವಾಮಿ ಅವರ ಪೂರ್ಣಕುಂಭ ಸ್ವಾಗತಕ್ಕಾಗಿ 5 ಸಾವಿರ ಬಿಂದಿಗೆಗಳನ್ನು ತರಿಸಿದ್ದರು. ಇದರಲ್ಲಿ 1 ಸಾವಿರ ಪೂರ್ಣ ಕುಂಭ ಸ್ವಾಗತಕ್ಕೆ ಬಳಸಿದ್ದು, ಉಳಿದ ಬಿಂದಿಗೆಗಳನ್ನು ಜನರಿಗೆ ವಿತರಿಸಲಾಗಿದೆ.
Last Updated : Feb 3, 2023, 8:37 PM IST