ಸಿದ್ದರಾಮಯ್ಯ, ಆಂಜನೇಯ ಮನೆಗೂ ಅಯೋಧ್ಯೆಯ ಮಂತ್ರಾಕ್ಷತೆ ಬರುತ್ತೆ: ಸಿ ಟಿ ರವಿ - ಅಯೋಧ್ಯೆ
🎬 Watch Now: Feature Video
Published : Jan 3, 2024, 7:26 PM IST
ಚಿಕ್ಕಮಗಳೂರು : ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಆಮಂತ್ರಣ ಬರುತ್ತದೆಯೋ? ಇಲ್ಲವೋ? ಗೊತ್ತಿಲ್ಲ. ಆದರೇ ಮನೆ ಮನೆಗೆ ಮಂತ್ರಾಕ್ಷತೆ ಬರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಹೆಚ್. ಆಂಜನೇಯ ಅವರ ಮನೆಗೂ ಮಂತ್ರಾಕ್ಷತೆ ತಲುಪುತ್ತದೆ ಎಂದು ಮಾಜಿ ಸಚಿವ ಸಿ.ಟಿ ರವಿ ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕಾಗಿ ಹೋರಾಟ ಮಾಡಿದವರಿಗೆ ಇನ್ನು ಆಮಂತ್ರಣ ಬಂದಿಲ್ಲ. 1992 ರ ಕರ ಸೇವೆಯಲ್ಲಿ ನಾನು, ಸುನಿಲ್ ಕುಮಾರ್ ಸೇರಿದಂತೆ ಸಾಕಷ್ಟು ಜನ ಭಾಗವಹಿಸಿದ್ದೆವು. ನಮಗೆ ಇನ್ನೂ ಆಮಂತ್ರಣ ಬಂದಿಲ್ಲ. ಯಾರಿಗೆ ಆಮಂತ್ರಣ ಕೊಡಬೇಕು ಎಂಬ ನಿರ್ಧಾರ ಮಾಡುವ ಅಧಿಕಾರ ರಾಮ ಮಂದಿರ ನಿರ್ಮಾಣ ಟ್ರಸ್ಟಿಗೆ ಮಾತ್ರ ಇದೆ. ಆ ಅಧಿಕಾರ ಪ್ರಧಾನ ಮಂತ್ರಿಗಳಿಗೂ ಇಲ್ಲ. ಅವರು ಈ ಬಗ್ಗೆ ನಿರ್ಣಯ ಮಾಡುತ್ತಾರೆ. ಇನ್ನೂ ಕಾಲಾವಕಾಶ ಇದೆ. ಆಮಂತ್ರಣ ಪತ್ರಿಕೆ ಬರಬಹುದು, ಬರದೇ ಇರಬಹುದು ಎಂದು ಸಿ.ಟಿ ರವಿ ತಿಳಿಸಿದರು.
ರಾಮ ಮಂದಿರ ನಿರ್ಮಾಣ ಆಗಬೇಕು ಎಂದು ಕಾಂಗ್ರೆಸ್ ಯಾವಾಗ ಬಯಸಿತ್ತು?. ಅವರು ಬಯಸಿದ್ದರೆ ಸ್ವತಂತ್ರ ಭಾರತದಲ್ಲಿ ಹೋರಾಟ ಮಾಡುವ ಪ್ರಮೆಯವೇ ಇರುತ್ತಿರಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಮಂದಿರ ನಿರ್ಮಾಣ ಆಗುತ್ತಿತ್ತು. ಹೋರಾಟ ಹಾಗೂ ಕರ ಸೇವೆ ಮಾಡುವ ಸಂದರ್ಭ ಬರುತ್ತಿರಲಿಲ್ಲ. ಸಿದ್ದರಾಮಯ್ಯ ಮತ್ತು ಆಂಜನೇಯ ಅವರು ರಾಮ ಮಂದಿರ ನಿರ್ಮಾಣ ಹೋರಾಟದ ಸಂದರ್ಭದಲ್ಲಿ ಒಂದೇ ಒಂದು ಹೇಳಿಕೆ ಕೊಟ್ಟ ನೆನಪು ನನಗೆ ಇಲ್ಲ ಎಂದರು.
ಇದನ್ನೂ ಓದಿ : ಸಿದ್ದರಾಮಯ್ಯನವರೇ ರಾಮ, ಸಿದ್ದರಾಮನಹುಂಡಿಯಲ್ಲಿ ಪೂಜೆ ಮಾಡ್ತಾರೆ; ಹೆಚ್ ಆಂಜನೇಯ