ETV Bharat / sports

ಸಚಿನ್​ ತೆಂಡೂಲ್ಕರ್​ಗೆ ಜೀವಮಾನ ಸಾಧನೆ ಪ್ರಶಸ್ತಿ ಗರಿ: ದಿಗ್ಗಜರ ಪಟ್ಟಿಗೆ ಲಿಟಲ್​ ಮಾಸ್ಟರ್​ ಎಂಟ್ರಿ! - SACHIN TENDULKAR

Sachin Tendulkar: ಭಾರತದ ಮಾಜಿ ದಿಗ್ಗಜ ಕ್ರಿಕೆಟರ್​ ಸಚಿನ್​ ತಂಡೂಲ್ಕರ್​ ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ.

BCCI LIFETIME ACHIEVEMENT AWARD  SACHIN TENDULKAR BCCI AWARD  SACHIN TENDULKAR NEWS  ಸಚಿನ್​ ತೆಂಡೂಲ್ಕರ್
Sachin Tendulkar (ANI)
author img

By ETV Bharat Sports Team

Published : Jan 31, 2025, 6:10 PM IST

Sachin Tendulkar: ವಿಶ್ವ ಕಂಡ ಶ್ರೇಷ್ಠ ಕ್ರಿಕೆಟರ್​ಗಳಲ್ಲಿ ಭಾರತದ ಲಿಟಲ್​ ಮಾಸ್ಟರ್​ ಸಚಿನ್​ ತೆಂಡೂಲ್ಕರ್​ ಕೂಡ ಒಬ್ಬರು. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 100 ಶತಕ ಸಿಡಿಸಿದ ವಿಶ್ವದ ಏಕೈಕ ಬ್ಯಾಟರ್​ ಆಗಿರುವ ಸಚಿನ್​ ಭಾರತದ ಪರ 664 ಪಂದ್ಯಗಳನ್ನು ಆಡಿದ ಏಕೈಕ ಬ್ಯಾಟರ್​ ಕೂಡ ಹೌದು.

ಇಂತಹ ದಿಗ್ಗಜ ಕ್ರಿಕೆಟಿಗನಿಗೆ ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿ ಘೋಷಿಸಿದೆ. ಶನಿವಾರ ನಡೆಯಲಿರುವ ಬಿಸಿಸಿಐ ವಾರ್ಷಿಕ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಸಿಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿಗೆ ಸಚಿನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಆಪ್ತ ಮೂಲಗಳು ಸುದ್ದಿವಾಹಿನಿಯೊಂದಕ್ಕೆ ತಿಳಿಸಿವೆ. ಸಚಿನ್ ಈ ಪ್ರಶಸ್ತಿ ಪಡೆಯುತ್ತಿರುವ 31ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತು ಲೆಜೆಂಡರಿ ವಿಕೆಟ್ ಕೀಪರ್ ಫಾರೂಕ್ ಇಂಜಿನಿಯರ್ ಈ ಹಿಂದೆ ಜೀವಮಾನ ಸಾಧನೆ ಪ್ರಶಸ್ತಿ ಪಡೆದುಕೊಂಡಿದ್ದರು.

ಭಾರತ ತಂಡದ ಮೊದಲ ನಾಯಕ ಕರ್ನಲ್ ಸಿಕೆ ನಾಯ್ಡು ಅವರ ಗೌರವಾರ್ಥವಾಗಿ 1994ರಲ್ಲಿ ಬಿಸಿಸಿಐ ಈ ಪ್ರಶಸ್ತಿ ಜಾರಿಗೆ ತಂದಿತು. ಸಿ.ಕೆ.ನಾಯ್ಡು ಅವರು 1916 ರಿಂದ 1963ರವರೆಗೆ 47 ವರ್ಷಗಳ ಸುದೀರ್ಘ ಅವಧಿಗೆ ಪ್ರಥಮ ದರ್ಜೆ ಕ್ರಿಕೆಟ್​ ಆಡಿ ವಿಶ್ವ ದಾಖಲೆ ಬರೆದಿದ್ದರು.

ಸಚಿನ್​ ತೆಂಡೂಲ್ಕರ್​ ದಾಖಲೆ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಏಕೈಕ ಆಟಗಾರ ಸಚಿನ್ ತೆಂಡೂಲ್ಕರ್. 100 ಶತಕ ಬಾರಿಸಿದ ಏಕೈಕ ಆಟಗಾರ ಕೂಡ ಹೌದು. ಟೆಸ್ಟ್ ಕ್ರಿಕೆಟ್‌ನ ಹೊರತಾಗಿ, ಸಚಿನ್ ಏಕದಿನ ಮಾದರಿಯಲ್ಲಿಯೂ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವರು ODIಗಳಲ್ಲಿ 49 ಶತಕಗಳು ಮತ್ತು 96 ಅರ್ಧ ಶತಕಗಳನ್ನು ಒಳಗೊಂಡಂತೆ 44.83ರ ಸರಾಸರಿಯಲ್ಲಿ 18,426 ರನ್ ಗಳಿಸಿದ್ದಾರೆ.

ಟೆಸ್ಟ್‌ನಲ್ಲಿ 53.78ರ ಸರಾಸರಿಯಲ್ಲಿ 15,921 ರನ್ ಗಳಿಸಿದ್ದಾರೆ. ಇದರಲ್ಲಿ 51 ಶತಕಗಳು ಮತ್ತು 68 ಅರ್ಧ ಶತಕಗಳು ಸೇರಿವೆ. ಅವರು ತಮ್ಮ ವೃತ್ತಿಜೀವನದಲ್ಲಿ ಕೇವಲ ಒಂದು T20 ಅಂತಾರಾಷ್ಟ್ರೀಯ ಪಂದ್ಯವನ್ನು ಮಾತ್ರ ಆಡಿದ್ದಾರೆ. ಭಾರತದ ಪರ ಒಟ್ಟು ಏಕದಿನ, ಟೆಸ್ಟ್​, ಟಿ-20 ಸೇರಿ ಮೂರು ಸ್ವರೂಪಗಳಲ್ಲಿ ಒಟ್ಟು 664 ಪಂದ್ಯಗಳನ್ನು ಆಡಿರುವ ಸಚಿನ್​ 48.52ರ ಸರಾಸರಿಯಲ್ಲಿ 34,357 ರನ್ ಗಳಿಸಿದ್ದಾರೆ. ಇವುಗಳಲ್ಲಿ 100 ಶತಕಗಳು ಮತ್ತು 164 ಅರ್ಧ ಶತಕಗಳು ಸೇರಿವೆ.

ಇದನ್ನೂ ಓದಿ: ಐಸಿಸಿ ಚಾಂಪಿಯನ್ಸ್​ ಟ್ರೋಫಿಗೂ ಮೊದಲೇ ಬಿಗ್ ಶಾಕ್​: ವಿಶ್ವಕಪ್​ ವಿಜೇತ ಆಲ್​ರೌಂಡರ್​ ಔಟ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.