Viral video: ಉಳ್ಳಾಲದಲ್ಲಿ ಪವಾಡ ಸದೃಶ್ಯ ರೀತಿ ಮಹಿಳೆ ಪಾರು - ಬಸ್ ಚಾಲಕನ ಚಾಣಾಕ್ಷತ
🎬 Watch Now: Feature Video
ಉಳ್ಳಾಲ (ದಕ್ಷಿಣ ಕನ್ನಡ): ಪಾದಚಾರಿ ಮಹಿಳೆಯೊಬ್ಬರು ಬಸ್ ಅಪಘಾತದಿಂದ ಪವಾಡ ಸದೃಶ್ಯ ರೀತಿಯಲ್ಲಿ ಪಾರಾದ ಘಟನೆ ತೌಡುಗೋಳಿ ಸಮೀಪದ ನರಿಂಗಾನದಲ್ಲಿ ಇತ್ತೀಚೆಗೆ ನಡೆದಿದ್ದು, ಈ ಕುರಿತಾದ ವಿಡಿಯೋ ವೈರಲ್ ಆಗಿದೆ. ಮಂಗಳೂರು ಮುಡಿಪುಗೆ ಚಲಿಸುವ ಗೋಪಾಲಕೃಷ್ಣ ಖಾಸಗಿ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಮಹಿಳೆಯ ಜೀವ ಉಳಿದಿದೆ.
ಇದನ್ನೂ ಓದಿ : ರಾಮನಗರ: ಮನಕಲಕುವಂತಿದೆ ಅಪಘಾತಕ್ಕೂ ಮುಂಚಿನ ಗೆಳೆಯರ ಕುಚುಕು ವಿಡಿಯೋ..
ವಿಡಿಯೋದಲ್ಲೇನಿದೆ? : ಮಹಿಳೆಯೋರ್ವರು ಪಕ್ಕದಲ್ಲಿ ಬರುವ ವಾಹನಗಳನ್ನು ಗಮನಿಸದೆ ರಸ್ತೆ ದಾಟಿದ್ದಾರೆ. ಈ ವೇಳೆ ಎದುರಿನಿಂದ ಬಸ್ ಬಂದಿದೆ. ಮಹಿಳೆ ರಸ್ತೆ ದಾಟುವುದನ್ನು ಗಮನಿಸಿದ ಡ್ರೈವರ್ ಕೂಡಲೇ ಎಡಕ್ಕೆ ಬಸ್ ತಿರುಗಿಸಿದ್ದರಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಬಳಿಕ, ಎಲ್ಲರೂ ಮಹಿಳೆಯ ಆರೋಗ್ಯ ವಿಚಾರಿಸಿ ಕಳುಹಿಸಿದ್ದಾರೆ. ಘಟನೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : ರೈಲು ಹಳಿಯ ಮೇಲೆ ಕಲ್ಲು ಜೋಡಿಸಿಟ್ಟ ಬಾಲಕ.. ಅಪಾಯಕಾರಿ ವಿಡಿಯೋ ವೈರಲ್
ಇನ್ನು ಘಟನೆ ಕುರಿತು ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿ, ಚಾಲಕನ ವಿರುದ್ಧ ಅತೀವೇಗ ಮತ್ತು ಅಪಾಯಕಾರಿ ವಾಹನ ಚಾಲನೆ ಅಡಿ ಕೇಸ್ ದಾಖಲಾಗಿದೆ ಎಂದು ತಿಳಿಸಿದ್ದಾರೆ.