Watch: ಇಂಜಿನ್​ ಇಲ್ಲದೆ ಹಳಿ ಮೇಲೆ ಚಲಿಸಿದ ರೈಲು ಬೋಗಿ-ವಿಡಿಯೋ - Barhadwa railway station

🎬 Watch Now: Feature Video

thumbnail

By ETV Bharat Karnataka Team

Published : Sep 4, 2023, 8:22 AM IST

ಸಾಹಿಬ್‌ಗಂಜ್: ಜಾರ್ಖಂಡ್​ನ ಬರ್ಹದ್ವಾ ರೈಲು ನಿಲ್ದಾಣದಲ್ಲಿ ಇಂಜಿನ್ ಇಲ್ಲದೆ ಕೆಲ ಬೋಗಿಗಳು ಟ್ರ್ಯಾಕ್‌ನಲ್ಲಿ ಚಲಿಸಿದ ವಿಚಿತ್ರ ಘಟನೆ ನಡೆದಿದೆ. ಹೌದು, ವಿಡಿಯೋದಲ್ಲಿ ನಿರ್ವಹಣಾ ವಿಶೇಷ ಕೋಚ್‌ ರೈಲಿನ ಹಿಂದೆ ಸರಕು ಸಾಗಣಿಕೆಯ ಗೂಡ್ಸ್ ರೈಲಿನ ಒಂದು ಬೋಗಿ ಇಂಜಿನ್​ ಇಲ್ಲದೆ ಡಿಕ್ಕಿ ಹೊಡೆದಿರುವುದನ್ನು ನೀವು ನೋಡಬಹುದು. ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮಾಲ್ಡಾ ವಿಭಾಗದ ಬರ್ಹದ್ವಾ ರೈಲು ನಿಲ್ದಾಣದಲ್ಲಿ ಲೋಡ್ ಮಾಡಿದ್ದ 2 ಗೂಡ್ಸ್ ರೈಲು ಬೋಗಿಗಳು ಕಳೆದ 10-15 ದಿನಗಳಿಂದ ರೈಲ್ವೆ ಹಳಿ ಮೇಲೆ ನಿಂತಿದ್ದವು.  

ನಾಲ್ಕು ಬೋಗಿಗಳ ವಿಶೇಷ ಕೋಚ್ ಕೂಡ ಅದೇ ರೈಲು ಹಳಿಯಲ್ಲಿ ನಿಂತಿತ್ತು. ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಇದ್ದಕ್ಕಿದ್ದ ಹಾಗೆ ಗೂಡ್ಸ್ ರೈಲಿನ ಎರಡೂ ಬೋಗಿಗಳು ಚಲಿಸತೊಡಗಿವೆ. ಈ ಬೋಗಿಗಳು ಚಲಿಸುತ್ತಿರುವುದನ್ನು ಕಂಡು ರೈಲ್ವೆ ಹಳಿಯ ಪಕ್ಕದಲ್ಲಿ ವಾಸಿಸುತ್ತಿದ್ದ ಗ್ರಾಮಸ್ಥರು ಅಲಾರಾಂ ಮಾಡಿ ಹೇಗೋ ಒಂದು ಕೋಚ್ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅದೇ ಸಮಯದಲ್ಲಿ, ಗೂಡ್ಸ್ ರೈಲಿನ ಎರಡನೇ ಕಂಪಾರ್ಟ್‌ಮೆಂಟ್ ರೈಲ್ವೆ ಹಳಿಯಲ್ಲಿ ನಿಂತಿದ್ದ ನಿರ್ವಹಣಾ ವಿಶೇಷ ಕೋಚ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನಿರ್ವಹಣಾ ವಿಶೇಷ ಕೋಚ್ ಸಹ ಹಳಿಯಲ್ಲಿ ಚಲಿಸಲು ಪ್ರಾರಂಭಿಸಿತು. 

ಇಂಜಿನ್ ಇಲ್ಲದ ಈ ಕೋಚ್ ಬರ್ಹದ್ವಾ-ರಾಜಮಹಲ್ ರಸ್ತೆಯನ್ನು ದಾಟಿ ಬರ್ಹದ್ವಾ ನಿಲ್ದಾಣದ ಕಡೆಗೆ ಸಾಗಿತು. ಆದರೆ, ಪ್ಲಾಟ್‌ಫಾರ್ಮ್‌ ಪ್ರವೇಶಿಸುವ ಮುನ್ನವೇ ವಿಶೇಷ ಕೋಚ್‌ ಮತ್ತು ಗೂಡ್ಸ್‌ ರೈಲು ಇಂಜಿನ್‌ ನಿರ್ವಹಣೆ ಇಲ್ಲದೆ ನಿಂತಿದೆ. ಇನ್ನು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಬರ್ಹದ್ವಾ ನಿವಾಸಿಗಳು ಮಾಲ್ಡಾ ವಿಭಾಗದ ಜಿಎಂ ಅವರಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಬರ್ಹದ್ವಾ ಸ್ಟೇಷನ್ ಮ್ಯಾನೇಜರ್ ನಿರಂಜನ್ ಕುಮಾರ್ ಭಗತ್ ಅವರು ಈ ಘಟನೆ ಕುರಿತು, ಇಳಿಜಾರು ಇದ್ದ ಕಾರಣ ಇಂಜಿನ್ ಇಲ್ಲದೆ ರೈಲು ಕೋಚ್ ಸ್ವಯಂಚಾಲಿತವಾಗಿ ಹಳಿಗಳ ಮೇಲೆ ಓಡಲು ಪ್ರಾರಂಭಿಸಿತು. ಯಾವುದೇ ರೀತಿಯ ಪ್ರಾಣಹಾನಿಯಾಗಿಲ್ಲ. ಈ ಬಗ್ಗೆ ಪ್ರಕರಣದ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ದೆಹಲಿ: ಪ್ರಗತಿ ಮೈದಾನದ ಬಳಿ ಹಳಿ ತಪ್ಪಿದ ಲೋಕಲ್ ರೈಲು- ವಿಡಿಯೋ

For All Latest Updates

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.