ಜಂಗಲ್ ಸಫಾರಿ ವೇಳೆ ಪ್ರವಾಸಿಗರ ಮೇಲೆ ದಾಳಿಗೆ ಯತ್ನಿಸಿದ ಹುಲಿ; ಚಾಲಕನ ವಿರುದ್ದ ಪ್ರಕರಣ ದಾಖಲು - ಹುಲಿ ದಾಳಿ
🎬 Watch Now: Feature Video

ನೈನಿತಾಲ್ (ಉತ್ತರಾಖಂಡ): ಜೀಪ್ನಲ್ಲಿ ಜಂಗಲ್ ಸಫಾರಿಗೆ ತೆರಳುತ್ತಿದ್ದ ಪ್ರವಾಸಿಗರ ಮೇಲೆ ಹುಲಿಯೊಂದು ದಾಳಿ ನಡೆಸಲು ಯತ್ನಿಸಿರುವ ಘಟನೆ ಇಲ್ಲಿಯ ರಾಮನಗರ ಕಾರ್ಬೆಟ್ ಪಾರ್ಕ್ ಸೀತಾಬಾನಿ ಅರಣ್ಯದಲ್ಲಿ ನಡೆದಿದೆ. ಸಫಾರಿ ವೇಳೆ ರಸ್ತೆ ಪಕ್ಕದಲ್ಲಿ ಹುಲಿ ಕಂಡು ಬಂದಿದೆ. ಇದನ್ನು ನೋಡಲೆಂದು ಚಾಲಕ ಜೀಪ್ ಅನ್ನು ರಸ್ತೆ ಮೇಲೆ ನಿಲ್ಲಿಸಿದ್ದಾನೆ. ಈ ವೇಳೆ ಹುಲಿ ಇದ್ದಕ್ಕಿದ್ದಂತೆ ಪ್ರವಾಸಿಗರ ಜೀಪಿನ ಮೇಲೆ ದಾಳಿಗೆ ಮುಂದಾಗಿದೆ.
ಇದರಿಂದ ಜೀಪಿನಲ್ಲಿ ಕುಳಿತಿದ್ದ ಪ್ರಯಾಣಿಕರು ಬೆಚ್ಚಿ ಬಿದ್ದಿದ್ದಾರೆ. ಅಲ್ಲದೇ ಹುಲಿ ದಾಳಿ ನಡೆಸುತ್ತದೆ ಎಂದು ಕಿರುಚಾಡಿದರು ಭಯ ಪಡದ ಹುಲಿ ದಾಳಿಕೆ ಯತ್ನಿಸಿದೆ. ಈ ವೇಳೆ, ಚಾಲಕ ಜೀಪನ್ನು ವೇಗವಾಗಿ ಮುಂದೆ ಚಲಾಯಿಸಿದ್ದಾನೆ. ಬಳಿಕ ಜೀಪನ್ನು ಹಿಂದೆ ಕೊಂಡೊಯ್ದಿದ್ದಾನೆ. ಇದರಿಂದ ಹೆದರಿದ ಹುಲಿ ಕಾಡಿನೊಳಗೆ ಓಡಿ ಹೋಗಿದೆ. ಈ ಘಟನೆಯಿಂದ ಅರಣ್ಯ ಇಲಾಖೆ ಸಫಾರಿ ಬಗ್ಗೆ ನಿಗಾವಹಿಸಿದೆ.
ಇನ್ನು ಜಿಪ್ಸಿ ಚಾಲಕ ಹುಲಿಯ ಬಳಿ ಜೀಪು ನಿಲ್ಲಿಸಿ ಅದನ್ನು ಪ್ರಚೋದಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಅದು ದಾಳಿಗೆ ಮುಂದಾಗಿದೆ ಎನ್ನಲಾಗಿದೆ. ಚಾಲಕನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಂಬಂಧಿಸಿದ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: 24 ಗಂಟೆಯೊಳಗೆ ಇಬ್ಬರನ್ನು ಬಲಿ ಪಡೆದ ಹುಲಿ.. ಬೆಚ್ಚಿಬಿದ್ದ ಮಡಿಕೇರಿ ಜನ