ನಗರಸಭೆ ಚುನಾವಣಾ ಪ್ರಚಾರ..ಬೈಕ್ನಲ್ಲಿ ನಟಿ ಅಕ್ಷರಾ ಸಿಂಗ್: ವಿಡಿಯೋ - ಮೇಯರ್ ಅಭ್ಯರ್ಥಿ ಗರಿಮಾ ದೇವಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17315627-thumbnail-3x2-bin.jpg)
ಬೆತಿಯಾ (ಬಿಹಾರ): ನಗರಸಭೆ ಚುನಾವಣಾ ಪ್ರಚಾರಕ್ಕಾಗಿ ಬೆತಿಯಾಗೆ ನಟಿ ಅಕ್ಷರಾ ಸಿಂಗ್ ಆಗಮಿಸಿದ್ದರು. ಅವರು ಕಾರಿನಿಂದ ಇಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಫೋಟೋಗಾಗಿ ಮುಗಿಬಿದ್ದರು. ಜನ ಸಂದಣಿ ಕಂಡ ಅಭ್ಯರ್ಥಿಯ ಪತಿ ಅಕ್ಷರಾ ಸಿಂಗ್ ಅವರನ್ನು ಸ್ಕೂಟಿ ಮೇಲೆ ಕೂರಿಸಿಕೊಂಡು ಹೊರಟರು. ಆದರೆ, ಆಗಲೂ ಬಿಡದ ಅಭಿಮಾನಿಗಳು ಸ್ಕೂಟಿ ಹಿಂದೆ ಓಡತೊಡಗಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಕ್ಷರಾ ಸಿಂಗ್ ಸ್ಕೂಟಿ ಹಿಂದೆ ಕುಳಿತಿದ್ದು, ಮೇಯರ್ ಅಭ್ಯರ್ಥಿ ಗರಿಮಾ ದೇವಿ ಸಿಕರಿಯಾ ಅವರ ಪತಿ ರೋಹಿತ್ ಸಿಕರಿಯಾ ಸ್ಕೂಟಿ ಓಡಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಅಕ್ಷರಾ ಸಿಂಗ್ ಮುಖವನ್ನು ಮುಚ್ಚಿಕೊಂಡು ಸ್ಕೂಟಿಯಲ್ಲಿ ಹಿಂದೆ ಕುಳಿತಿದ್ದಾರೆ.
Last Updated : Feb 3, 2023, 8:37 PM IST