ಸಾಂಪ್ರದಾಯಕ ಉಡುಗೆಯಲ್ಲಿ ವೇದ ಶಾಲಾ ವಿದ್ಯಾರ್ಥಿಗಳಿಂದ ಕ್ರಿಕೆಟ್: ವಿಡಿಯೋ - ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ
🎬 Watch Now: Feature Video
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶ್ರೀವ್ಯಾಸತೀರ್ಥ ವಿದ್ಯಾಪೀಠದ ಆಶ್ರಯದಲ್ಲಿ ಎರಡು ದಿನಗಳ ಕಾಲ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಜಯಧ್ವಜ, ರಾಜೇಂದ್ರ, ವಾರಿಧಿ ಹಾಗೂ ರತ್ನಾಕರ್ ಎಂಬ ನಾಲ್ಕು ತಂಡಗಳು ಭಾಗವಹಿಸಿದ್ದವು. ತಂಡದ ಆಟಗಾರರು ಟಿ ಶರ್ಟ್, ಪಂಚೆ ಧರಿಸಿದ್ದರು. ಟಿ ಶರ್ಟ್ ಮೇಲೆ ಸಂಸ್ಕೃತ ಭಾಷೆ ಬಳಸಿದ್ದು ಮನಸೆಳೆಯುವಂತಿತ್ತು. ಪ್ರತಿನಿತ್ಯ ವೇದ ಸಂಸ್ಕೃತ ಪಠಿಸುತ್ತಿದ್ದ ವಿದ್ಯಾರ್ಥಿಗಳು ಕ್ರಿಕೆಟ್ ಪಟುಗಳಾಗಿ ಮೈದಾನಕ್ಕಿಳಿದಿದ್ದು ವಿಶೇಷವಾಗಿತ್ತು.
Last Updated : Feb 3, 2023, 8:35 PM IST