ಬೆಂಗಳೂರು: ರಸ್ತೆ ಸಂಚಾರ ನಿಯಮಗಳ ಬಗ್ಗೆ ಯಮಧರ್ಮ, ಚಿತ್ರಗುಪ್ತರಿಂದ ಜಾಗೃತಿ - Upparapet traffic station police

🎬 Watch Now: Feature Video

thumbnail

By ETV Bharat Karnataka Team

Published : Jan 14, 2024, 2:59 PM IST

ಬೆಂಗಳೂರು: ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಕಾರಣದಿಂದ ಸಾವು-ನೋವುಗಳು ಸಂಭವಿಸುತ್ತಿದ್ದರೂ ನಗರದಲ್ಲಿ ನಿಯಮ ಉಲ್ಲಂಘಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಅಂಥವರಿಗಾಗಿಯೇ ಇಂದು ಸಂಚಾರಿ ನಿಯಮ‌ಗಳ ಕುರಿತು ಜಾಗೃತಿ ಮೂಡಿಸಲು ಖುದ್ದು ಯಮ ಧರ್ಮರಾಜ ಹಾಗೂ ಚಿತ್ರಗುಪ್ತ ಬೆಂಗಳೂರಿನ ರಸ್ತೆಯಲ್ಲಿ ಕಾಣಿಸಿಕೊಂಡು ಅರಿವು ಮೂಡಿಸಿದರು. 

ಉಪ್ಪಾರಪೇಟೆ ಸಂಚಾರ ಪೊಲೀಸರು ವಾಹನ ಸವಾರರಿಗೆ ಸಂಚಾರಿ ನಿಯಮಗಳ ಕುರಿತು ಅರಿವು ಮೂಡಿಸಲು ರಂಗಭೂಮಿ ಕಲಾವಿದರನ್ನು ಬಳಸಿಕೊಂಡರು. ಇಂಥದ್ದೊಂದು ವಿನೂತನ ಪ್ರಯತ್ನವನ್ನು ನಗರದ ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ಕೈಗೊಂಡರು. ಹೆಲ್ಮೆಟ್ ಧರಿಸದೇ ಅಥವಾ ಅರ್ಧ ಹೆಲ್ಮೆಟ್ ಧರಿಸಿ ಬರುವ ದ್ವಿಚಕ್ರ ವಾಹನ ಸವಾರರು ಮತ್ತು ವಾಹನ ಚಾಲನೆಯ ಸಂದರ್ಭದಲ್ಲಿ ಮೊಬೈಲ್ ಫೋನ್‌ನಲ್ಲಿ ಮಾತನಾಡುವವರಿಗೆ ಗುಲಾಬಿ ಹೂಗಳನ್ನು ನೀಡಿ ಯಮಧರ್ಮನ ವೇಷಧಾರಿ ಎಚ್ಚರಿಕೆ ಕೊಟ್ಟರು.

"ನಿಮಗಾಗಿ ನಿಮ್ಮವರು ಮನೆಯಲ್ಲಿ ಕಾಯುತ್ತಿರುತ್ತಾರೆ. ಸಂಚಾರ ನಿಯಮ ಪಾಲಿಸಿದರೆ ಮಾತ್ರ ಸೇಫ್ ಆಗಿ ಮನೆ ತಲುಪುತ್ತೀರಿ. ಆದ್ದರಿಂದ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಿ" ಎಂದು ಅರಿವು ಮೂಡಿಸಿದರು. ರಂಗಭೂಮಿ ಕಲಾವಿದರಾದ ನಾಗೇಂದ್ರ ಹಾಗೂ ರಂಗನಾಥ್ ಅವರು ಯಮಧರ್ಮ ಹಾಗೂ ಚಿತ್ರಗುಪ್ತನ ವೇಷದಲ್ಲಿ ಕಾಣಿಸಿಕೊಂಡರು.    

ಇದನ್ನೂ ಓದಿ: ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿದ ಹೈಟೆನ್ಷನ್ ವಿದ್ಯುತ್ ಕಂಬ: ವಿಡಿಯೋ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.