ಮೋದಿ ರೋಡ್ ಶೋ ವೇಳೆ ಟ್ರಾಫಿಕ್ನಲ್ಲಿ ಸಿಲುಕಿದ ಆಂಬ್ಯುಲೆನ್ಸ್ಗಳು
🎬 Watch Now: Feature Video
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಸಾಗುತ್ತಿದ್ದ ಮಾರ್ಗದಲ್ಲಿ ಆಗಮಿಸಿದ ಎರಡು ಆಂಬ್ಯುಲೆನ್ಸ್ಗಳು ಟ್ರಾಫಿಕ್ನಲ್ಲಿ ಸಿಲುಕಿಕೊಂಡವು. ಭದ್ರತಾ ಕಾರಣಕ್ಕಾಗಿ ಬ್ಯಾರಿಕೇಡ್ ಅಳವಡಿಸಿದ್ದರಿಂದ ರೋಡ್ ಶೋ ಮುಂದೆ ಸಾಗುವವರೆಗೂ ರಸ್ತೆಯಲ್ಲಿ ಆಂಬ್ಯುಲೆನ್ಸ್ಗಳು ನಿಲ್ಲಬೇಕಾಯಿತು. ಜಯನಗರ ಮೆಟ್ರೋ ನಿಲ್ದಾಣದ ಬಳಿ ಎರಡು ಆಂಬ್ಯುಲೆನ್ಸ್ ವಾಹನಗಳು ರಸ್ತೆ ಮಧ್ಯೆ ಸಿಲುಕಿ ಹಾಕಿಕೊಂಡಿದ್ದವು.
ಮೋದಿ ರೋಡ್ ಶೋ ಹಿನ್ನೆಲೆ ಬ್ಯಾರಿಕೇಡ್ ಹಾಕಿದ್ದರಿಂದಾಗಿ 10 ನಿಮಿಷ ರಸ್ತೆಯಲ್ಲೇ ಸೈರನ್ ಮಾಡಿ, ಟ್ರಾಫಿಕ್ ಕ್ಲಿಯರೆನ್ಸ್ಗಾಗಿ ಕಾಯುತ್ತಾ ಇರಬೇಕಾಯಿತು. ಕಣ್ಣಮುಂದೆಯೇ ಆಂಬ್ಯುಲೆನ್ಸ್ಗಳು ಟ್ರಾಫಿಕ್ನಲ್ಲಿ ಸಿಲುಕಿದ್ದರೂ ಪೊಲೀಸರು ಏನು ಮಾಡಲಾಗದೆ ಸುಮ್ಮನೆ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಂದೋಬಸ್ತ್ನಲ್ಲಿ ತೊಡಗಿದ್ದ ಪೊಲೀಸರು, ಟ್ರಾಫಿಕ್ ಕ್ಲಿಯರ್ ಮಾಡುವುದಕ್ಕಿಂತಲೂ ಪ್ರಧಾನಿಗೆ ಭದ್ರತೆ ಕಲ್ಪಿಸಲು ಹೆಚ್ಚು ಆಧ್ಯತೆ ನೀಡಬೇಕಾದ ಕಾರಣ ಟ್ರಾಫಿಕ್ನಿಂದ ಹೊರಬರಲು ಆಂಬ್ಯುಲೆನ್ಸ್ಗಳು ಪರದಾಡಬೇಕಾಯಿತು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರೋಡ್ ಶೋ ಬೆಂಗಳೂರಿನ ಜೆ.ಪಿ. ನಗರದ ಸೋಮೇಶ್ವರ ಭವನದಿಂದ ಬೆಳಗ್ಗೆ 10.30ಕ್ಕೆ ಆರಂಭವಾಗಿ ಅಂದಾಜು 26 ಕಿಮೀ ವರೆಗೆ ಸಾಗಿತು.
ಇದನ್ನೂ ಓದಿ : ಮೋದಿ ರೋಡ್ ಶೋನಲ್ಲಿ ರಾರಾಜಿಸುತ್ತಿರುವ ಬಜರಂಗಿ ಧ್ವಜಗಳು: ಕೇಸರಿ ಕಾರ್ಯಕರ್ತರಿಂದ ಕಾಂಗ್ರೆಸ್ಗೆ ಟಕ್ಕರ್