ನಾಗರಹೊಳೆಯಲ್ಲಿ ಮರವೇರಿ ಕುಳಿತ ಹುಲಿಯ ದೃಶ್ಯ ಸೆರೆ- ನೋಡಿ - tiger sitting in a tree
🎬 Watch Now: Feature Video
Published : Dec 27, 2023, 7:54 PM IST
ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸಫಾರಿ ವಾಹನ ಚಾಲಕರೊಬ್ಬರ ಮೊಬೈಲ್ ಕ್ಯಾಮರಾ ಕಣ್ಣಿನಲ್ಲಿ ಮರವೇರಿದ ಹುಲಿಯ ನೋಟ ಸೆರೆಯಾಗಿದೆ. ಈ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಹುಣಸೂರು ತಾಲೂಕಿನಲ್ಲಿ ಸಿಗುವ ನಾಣಚಿ ಅರಣ್ಯ ಪ್ರದೇಶದಲ್ಲಿ ಸಫಾರಿ ಸಂದರ್ಭದಲ್ಲಿ ಹುಲಿಯೊಂದು ಮರವೇರಿ ಕುಳಿತಿದ್ದುದು ಕಂಡುಬಂದಿದೆ. ಅತ್ತಿತ್ತ ನೋಡುತ್ತಾ ನಿಂತ ಹುಲಿಯ ಗಾಂಭೀರ್ಯತೆಯ ನೋಟವನ್ನು ತಕ್ಷಣ ಚಾಲಕ ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಹುಲಿ ಮರದಲ್ಲಿ ಹತ್ತಿ ನಿಂತು ಬೇಟೆಗಾಗಿ ಹವಣಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಸುತ್ತಲೂ ವೀಕ್ಷಿಸಿದ ಬಳಿಕ ಮರದಿಂದ ಕೆಳಗಿಳಿದ ಹುಲಿ ಕಾಡಿನಲ್ಲಿ ಮರೆಯಾಯಿತು.
ವರ್ಷಾಂತ್ಯದ ಕೊನೆಯ ದಿನಗಳಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಚಳಿ ವಾತಾವರಣದ ಹಿನ್ನೆಲೆಯಲ್ಲಿ ಪ್ರಾಣಿಗಳು ಬಿಸಿಲು ಕಾಯಲು ರಸ್ತೆ ಮಧ್ಯೆ ಬರುತ್ತಿರುವುದರಿಂದ ಪ್ರವಾಸಿಗರಿಗೆ ಪ್ರಾಣಿಗಳ ದರ್ಶನ ಭಾಗ್ಯ ಸಿಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಹುಲಿಗಳು ಕಾಡಂಚಿನ ಪ್ರದೇಶಗಳ ಗ್ರಾಮಗಳಿಗೆ ನುಗ್ಗಿ ಜಾನುವಾರಗಳನ್ನು ಭೇಟಿಯಾಡುತ್ತಿರುವುದು ಜನರಲ್ಲಿ ಆತಂಕ ಉಂಟುಮಾಡಿದೆ.
ಇದನ್ನೂಓದಿ: ಮೈಸೂರು: ಮಡುವಿನಹಳ್ಳಿ ಬಳಿ ಹೆಣ್ಣು ಚಿರತೆ ಸೆರೆ, ದೂರವಾದ ಗ್ರಾಮಸ್ಥರ ಆತಂಕ