ಚಲಿಸುತ್ತಿದ್ದ ಲಾರಿ ಕೆಳಗೆ ಬಿದ್ದ ತಾಯಿ, ಮಗ ಸೇರಿ ಮೂವರು: ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು.. ವಿಡಿಯೋ - ಲಾರಿ
🎬 Watch Now: Feature Video
Published : Sep 7, 2023, 5:47 PM IST
ಡೆಹ್ರಾಡೂನ್ (ಉತ್ತರಾಖಂಡ): ಆಯತಪ್ಪಿ ಚಲಿಸುತ್ತಿದ್ದ ಲಾರಿಯ ಮುಂಭಾಗದಲ್ಲಿ ಬೈಕ್ನಲ್ಲಿ ಸಂಚರಿಸುತ್ತಿದ್ದ ಮೂವರು ಬಿದ್ದ ಘಟನೆ ಉತ್ತರಾಖಂಡ ರಾಜಧಾನಿ ಡೆಹ್ರಾಡೂನ್‌ನಲ್ಲಿ ಬುಧವಾರ ನಡೆದಿದೆ. ಕೊಂಚ ಎಚ್ಚರ ತಪ್ಪಿದರೂ ಲಾರಿಯಡಿ ಮೂವರು ಸಿಲುಕುತ್ತಿದ್ದರು. ಈ ವೇಳೆ, ಚಾಲಕ ತಕ್ಷಣವೇ ಲಾರಿಯನ್ನು ನಿಲ್ಲಿಸಿದ ಕಾರಣ ಬೈಕ್ನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಲ್ಲಿನ ನೆಹರು ಕಾಲೋನಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ಬೈಪಾಸ್ ಚೌಕ್ ಕಡೆಯಿಂದ ರಿಸ್ಪಾನ ಸೇತುವೆ ಕಡೆಗೆ ಬೈಕ್ನಲ್ಲಿ ವಕ್ತಿಯೊಬ್ಬರು ತನ್ನ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಕೂಡಿಸಿಕೊಂಡು ಬರುತ್ತಿದ್ದರು. ಇದೇ ವೇಳೆ, ಬೈಕ್ ಹಿಂದೆ ಬರುತ್ತಿದ್ದ ಲಾರಿ ತಿರುವಿನಲ್ಲಿ ಬೈಕ್ಗೆ ಸ್ವಲ್ಪ ತಾಗಿದೆ. ಪರಿಣಾಮ ಬೈಕ್ ಸವಾರನ ನಿಯಂತ್ರಣ ತಪ್ಪಿ ಮೂವರು ಸಹ ಲಾರಿ ಅಡಿ ಬಿದ್ದಿದ್ದಾರೆ. ಆದರೆ, ಅದೃಷ್ಟವಶಾತ್ ನಿಧಾನವಾಗಿ ಲಾರಿ ಚಲಿಸುತ್ತಿತ್ತು. ಈ ಸಮಯದಲ್ಲಿ ಸ್ಥಳದಲ್ಲೇ ಇದ್ದ ಪೊಲೀಸರು ಓಡಿ ಬಂದು ಚಾಲಕನಿಗೆ ಟ್ರಕ್ ನಿಲ್ಲಿಸುವಂತೆ ಸೂಚಿಸಿ ಬೈಕ್ನಲ್ಲಿದ್ದ ಮೂವರನ್ನು ರಕ್ಷಣೆ ಮಾಡಿದ್ದಾರೆ. ಈ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಈ ಕುರಿತು ಸಂಚಾರ ಎಸ್ಪಿ ಸರ್ವೇಶ್ ಪನ್ವಾರ್ ಪ್ರತಿಕ್ರಿಯಿಸಿ, ಸ್ವಲ್ಪ ಎಚ್ಚರ ತಪ್ಪಿದರೂ ದೊಡ್ಡ ಅಪಘಾತ ಸಂಭವಿಸಬಹುದಿತ್ತು. ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಯಾರಿಗೂ ತೊಂದರೆಯಾಗದಂತೆ ಸುರಕ್ಷಿತವಾಗಿ ವಾಹನ ಚಲಾಯಿಸಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ದಾರಿ ತಪ್ಪಿಸಿದ ಗೂಗಲ್ ಮ್ಯಾಪ್: ಜಲಾಶಯದ ಹಿನ್ನೀರಿನಲ್ಲಿ ಮುಳುಗಿದ ಲಾರಿ!!