ನಾಗ್ಪುರದಲ್ಲಿ ರಾಮಾಯಣ ಸಾಂಸ್ಕೃತಿಕ ಕೇಂದ್ರ ಉದ್ಘಾಟಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು
🎬 Watch Now: Feature Video
ನಾಗ್ಪುರ(ಮಹಾರಾಷ್ಟ್ರ):ನಾಗ್ಪುರ ನಗರದ ಕೊರಾಡಿಯಲ್ಲಿ ಭಾರತೀಯ ವಿದ್ಯಾಭವನದಿಂದ ನಿರ್ಮಿಸಿದ ರಾಮಾಯಣ ಸಾಂಸ್ಕೃತಿಕ ಕೇಂದ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಾಳೆ ಉದ್ಘಾಟಿಸಲಿದ್ದಾರೆ. ಈ ರಾಮಾಯಣ ಸಾಂಸ್ಕೃತಿಕ ಕೇಂದ್ರದ ಒಳಗಡೆ ಏನಿರಲಿದೆ ಎಂಬ ಕುತೂಹಲ ಜನರಲ್ಲಿದೆ. ನಾಳೆ ಉದ್ಘಾಟನೆ ಸಮಾರಂಭದ ಹಿನ್ನೆಲೆ ರಾಮಾಯಣ ಸಾಂಸ್ಕೃತಿಕ ಕೇಂದ್ರದ ವಿಡಿಯೋ ಬಿಡುಗಡೆ ಮಾಡಲಾಗಿದೆ.
ನಾಗ್ಪುರ ಕೊರಾಡಿಯಲ್ಲಿ ಭಾರತೀಯ ವಿದ್ಯಾ ಸಂಸ್ಥೆಯಿಂದ ಭವನದ ರಾಮಾಯಣ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಲಾಗಿದೆ. ರಾಮಾಯಣ ಸಾಂಸ್ಕೃತಿಕ ಕೇಂದ್ರದಲ್ಲಿ ರಾಮಾಯಣದ ಸಂಪೂರ್ಣ ಚಿತ್ರರೂಪದಲ್ಲಿ ಆಕರ್ಷಕವಾಗಿ ಬಿಡಿಸಲಾಗಿದೆ. ಮೂರು ಎಕರೆ ಪ್ರದೇಶದಲ್ಲಿ ದಕ್ಷಿಣ ಭಾರತೀಯ ಶೈಲಿಯಲ್ಲಿ ಕೇಂದ್ರ ನಿರ್ಮಾಣಗೊಂಡಿದೆ. ಇದು ಎರಡು ಅಂತಸ್ತಿನ ಕಟ್ಟಡವಾಗಿದ್ದು, ಮೊದಲ ಮಹಡಿಯಲ್ಲಿ ರಾಮಾಯಣ ಮಹಾಕಾವ್ಯದ ದೃಶ್ಯಗಳನ್ನು ವಿವಿಧ ವರ್ಣಚಿತ್ರಗಳ ರೂಪದಲ್ಲಿ ಜೋಡಿಸಿ ಇಡಲಾಗಿದೆ.
ಮಹರ್ಷಿ ತುಳಸಿದಾಸರ ರಾಮಾಯಣದ ಬರವಣಿಗೆಯಿಂದ ಹಿಡಿದು ರಾಮಾಯಣದ ಮೂಲ ಕಥೆಯವರೆಗೆ ಒಟ್ಟು 108 ಚಿತ್ರಗಳನ್ನು ಈ ಗ್ಯಾಲರಿಯಲ್ಲಿ ಇಡಲಾಗಿದೆ . ಹಿಂದಿ, ಇಂಗ್ಲಿಷ್ ಮತ್ತು ಮರಾಠಿಯಲ್ಲಿ ಚಿತ್ರಗಳಲ್ಲಿನ ಘಟನೆಗಳು ಮತ್ತು ವ್ಯಕ್ತಿತ್ವ ಅರ್ಥಮಾಡಿಕೊಳ್ಳಲು ಹಿಂದಿ, ಇಂಗ್ಲಿಷ್ ಮತ್ತು ಮರಾಠಿಯಲ್ಲಿ ಮಾಹಿತಿ ಒದಗಿಸಲಾಗಿದೆ.
ಇದನ್ನೂ ಓದಿ :ರೂಬಿಕ್ಸ್ ಕ್ಯೂಬ್ ಬಿಡಿಸುವಲ್ಲಿ ಗಿನ್ನೆಸ್ ದಾಖಲೆ ನಿರ್ಮಿಸಿದ 6 ವರ್ಷದ ಬಾಲಕಿ