ಬೆಳಗಾವಿಯಲ್ಲಿ ಬಾಲಕನ ಕೊಲೆ ಪ್ರಕರಣ: ಎಸ್ಪಿ ಭೀಮಾಶಂಕರ ಗುಳೇದ ಹೇಳಿದ್ದೇನು? - ಈಟಿವಿ ಭಾರತ ಕರ್ನಾಟಕ
🎬 Watch Now: Feature Video
Published : Oct 25, 2023, 10:37 PM IST
ಚಿಕ್ಕೋಡಿ (ಬೆಳಗಾವಿ): ನಿಪ್ಪಾಣಿ ಬಾಳುಮಾಮಾ ನಗರದಲ್ಲಿ ನಡೆದ ಬಾಲಕನ ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಭೀಮಾಶಂಕರ ಗುಳೇದ ತಿಳಿಸಿದ್ದಾರೆ. ಬೆಳಗಾವಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಅಕ್ಟೋಬರ್ 23ನೇ ತಾರೀಖು ನಿಪ್ಪಾಣಿಯ ಶಹರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ನಾನು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ಸುಮಾರು 14 ವರ್ಷದ ಬಾಲಕನನ್ನು ದುಷ್ಕರ್ಮಿಗಳು ಕೊಲೆ ಮಾಡಿರುವುದು ಕಂಡುಬಂದಿತ್ತು. ಚಿಕ್ಕೋಡಿ ಡಿವೈಎಸ್ಪಿ ಮತ್ತು ಸಿಪ್ಪಾಣಿ ಸಿಪಿಐ ಕೇವಲ 24 ಗಂಟೆಗಳ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ" ಎಂದರು.
"ಘಟನೆಯ ದಿನ ಬಾಲಕ ಪಾರ್ಕ್ವೊಂದರಲ್ಲಿ ತನ್ನ ಸ್ನೇಹಿತರೊಂದಿಗಿದ್ದ. ಈ ವೇಳೆ ಆರೋಪಿ, ಕಾನೂನು ಸಂಘರ್ಷಕ್ಕೊಳಗಾಗಿರುವ ಬಾಲಕ ತನ್ನ ಮೊಬೈಲ್ ಫೋನ್ನಲ್ಲಿ ಹುಡುಗಿಯೊಬ್ಬಳ ಫೋಟೋ ತೋರಿಸುತ್ತಾನೆ. ಆಕೆಯ ಬಗ್ಗೆ ಮೃತ ಬಾಲಕ ಕಾಮೆಂಟ್ ಮಾಡಿದ್ದಾನೆ. ಈ ವಿಚಾರವಾಗಿ ಅವರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಈ ಸಂದರ್ಭದಲ್ಲಿ ಆರೋಪಿ ಬಾಲಕನೊಂದಿಗೆ 21 ವರ್ಷದ ಜುಬೇರ್ ಎಂಬ ಯುವಕ ಇದ್ದ. ಸದ್ಯ ಇಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ಜಮೀನು ವಿವಾದದ ಕಿತ್ತಾಟದಲ್ಲಿ 6 ಬಾರಿ ಟ್ರ್ಯಾಕ್ಟರ್ ಹತ್ತಿಸಿ ಯುವಕನ ಬರ್ಬರ ಹತ್ಯೆ!