ಅದ್ಧೂರಿಯಾಗಿ ನೆರವೇರಿದ ಚನ್ನಕೇಶವನ ರಥೋತ್ಸವ: ಸಾವಿರಾರು ಭಕ್ತರು ಭಾಗಿ - ರಥೋತ್ಸವ
🎬 Watch Now: Feature Video
Published : Jan 18, 2024, 8:02 AM IST
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಾಳೆಹೊಳೆ ಶ್ರೀ ಚೆನ್ನಕೇಶವ ವಾರ್ಷಿಕ ಜಾತ್ರಾ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು. ಪ್ರತಿ ವರ್ಷದಂತೆ ಈ ವರ್ಷವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ರಥೋತ್ಸವ ಸಂಪನ್ನಗೊಂಡಿತು.
ಚೆನ್ನಕೇಶವನ ಉತ್ಸವಮೂರ್ತಿ ರಥವೇರಿ ಕೂರುವ ಮುನ್ನ, ತಂತ್ರಿಗಳ ನೇತೃತ್ವದಲ್ಲಿ ಉತ್ಸವ ಮೂರ್ತಿಯ ಬಲಿ ಉತ್ಸವ ನಡೆಯಿತು. ತಂತ್ರಿಗಳು ಉತ್ಸವ ಮೂರ್ತಿಯನ್ನು ತಲೆ ಮೇಲೆ ಹೊತ್ತು ದೇವಸ್ಥಾನದ ಪ್ರಾಂಗಣದಲ್ಲಿ ಸುತ್ತು ಬಂದರು. ಈ ವೇಳೆ, ವಿವಿಧ ಪೂಜೆಗಳು ನೆರವೇರಿದವು. ಜಾತ್ರಾ ಮಹೋತ್ಸವದಲ್ಲಿ ಸುತ್ತಮುತ್ತಲ ಗ್ರಾಮದ ಸಾವಿರಾರು ಭಕ್ತರು ಪಾಲ್ಗೊಂಡಿದ್ದು, ದೇವರಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಮಾಡಿ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು. ಹರಕೆ ರೂಪದಲ್ಲಿ ತಾವು ಬೆಳೆದಿದ್ದ ಕಾಳು ಮೆಣಸು, ಏಲಕ್ಕಿ, ಅಡಿಕೆ, ಕಾಫಿ ಬೀಜ ಇತ್ಯಾದಿ ಧವಸ ಧಾನ್ಯಗಳನ್ನು ರಥಕ್ಕೆ ಎಸೆದು ದೇವರಿಗೆ ಸಮರ್ಪಿಸಿದರು. ಇದಲ್ಲದೇ ವಾರ್ಷಿಕ ಜಾತ್ರಾ ಮಹೋತ್ಸವದ ನಿಮಿತ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ವೇಳೆ, ಮಹಿಳಾ ಸದಸ್ಯರ ಭಜನಾ ಕಾರ್ಯಕ್ರಮ ಮೆರುಗು ನೀಡಿತು.
ಇದನ್ನೂ ನೋಡಿ: ಶ್ರೀ ಸಿದ್ದೇಶ್ವರ ಸಂಕ್ರಮಣ ಜಾತ್ರೆ: 3 ವರ್ಷಗಳ ಬಳಿಕ ತೊರವಿ ಬಳಿ ಜಾನುವಾರು ಜಾತ್ರೆ ಆಯೋಜನೆ