ಸಾಗರ: ಮಣಿಪುರದಲ್ಲಿ ಹಿಂಸಾಚಾರ ತಡೆಗೆ ಆಗ್ರಹಿಸಿ ಕ್ರೈಸ್ತ ಸಮುದಾಯದಿಂದ ಪ್ರತಿಭಟನೆ - ಮಣಿಪುರದಲ್ಲಿ ಎರಡು ತಿಂಗಳಿನಿಂದ ಹಿಂಸಾಚಾರ

🎬 Watch Now: Feature Video

thumbnail

By

Published : Aug 17, 2023, 10:40 PM IST

ಶಿವಮೊಗ್ಗ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ವಿರೋಧಿಸಿ ಸಾಗರ ತಾಲೂಕಿನ ಕ್ರೈಸ್ತ ಸಮುದಾಯದವರು ಇಂದು ಬೃಹತ್ ಪ್ರತಿಭಟನೆ ನಡೆಸಿದರು. ಸಾಗರ ಬಸ್ ನಿಲ್ದಾಣದಿಂದ ಹೊರಟ ಪ್ರತಿಭಟನಾ ಮೆರವಣಿಗೆೆ ಉಪವಿಭಾಗೀಯ ಕಚೇರಿವರೆಗೆ ಸಾಗಿತು. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಮಣಿಪುರದಲ್ಲಿ ಎರಡು ತಿಂಗಳಿನಿಂದ ಹಿಂಸಾಚಾರ ನಡೆಯುತ್ತಿದ್ದು ಇನ್ನೂ ನಿಲ್ಲುತ್ತಿಲ್ಲ. ಅಮಾಯಕರು ಬಲಿಯಾಗುತ್ತಿದ್ದಾರೆ. ಆಸ್ತಿ-ಪಾಸ್ತಿಗಳು‌ ನಾಶವಾಗುತ್ತಿವೆ. ಜನಜೀವನ ಅಸ್ತವ್ಯಸ್ತವಾಗಿದೆ. ದಿನನಿತ್ಯ ಅಲ್ಲಿನ ಜನರು ಆತಂಕದಲ್ಲೇ ಬದುಕಬೇಕಾಗಿದೆ. ಮಕ್ಕಳು, ಕುಟುಂಬಗಳು ಹಸಿವಿನಿಂದ ಬಳಲುತ್ತಿವೆ. ಇದರಿಂದ ಆ ರಾಜ್ಯದ ಜನರು ರಾಜ್ಯ ಬಿಟ್ಟು ಹೋಗುವ ದುಸ್ಥಿತಿ ಉದ್ಭವಿಸಿದೆ ಎಂದರು. 

ಹೀಗಾಗಿ, ಕೇಂದ್ರ ಸರ್ಕಾರ ತಕ್ಷಣವೇ ಮಣಿಪುರದಲ್ಲಿ ಶಾಂತಿ‌ ನೆಲೆಸುವಂತೆ ಮಾಡಬೇಕಿದೆ. ಮಣಿಪುರದ ಹಿಂಸಾಚಾರ ನಿರಂತರವಾಗಿ ನಡೆಯುತ್ತಿರುವುದು ರಾಜ್ಯದ ಪ್ರಗತಿಗೆ ಅಡ್ಡಗಾಲಾಗಿದೆ. ಈ ರಾಜ್ಯದಲ್ಲಿ ಶಾಂತಿ ಕದಡಿದವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಸಾಗರ ತಾಲೂಕು ಕ್ರೈಸ್ತ ಸಮುದಾಯ ತಹಸೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತು.

ಇದನ್ನೂಓದಿ: Rain Deficit: ರಾಜ್ಯದಲ್ಲಿ ಮಳೆ ಕೊರತೆಯಾಗಿರುವ ಜಿಲ್ಲೆಗಳೆಷ್ಟು, ಮಳೆ ಪ್ರಮಾಣ ಎಷ್ಟಿದೆ?

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.