ರಾಯಲ್ ವೆಡ್ಡಿಂಗ್: ಹೆಲಿಕಾಪ್ಟರ್ನಲ್ಲಿ ಮದುವೆ ಮೆರವಣಿಗೆ ಮಾಡಿಕೊಂಡ ವರ - ವಿಡಿಯೋ - etv bharat kannada
🎬 Watch Now: Feature Video
Published : Nov 25, 2023, 10:29 PM IST
ದ್ವಾರಕಾ, ಗುಜರಾತ್: ಗುಜರಾತ್ ರಾಜ್ಯದಲ್ಲಿ ಈಗ ಮದುವೆಯ ಸೀಸನ್ ಶುರುವಾಗಿದೆ. ಇಲ್ಲೊಬ್ಬ ವರ ಹೆಲಿಕಾಪ್ಟರ್ನಲ್ಲಿ ಮದುವೆ ಮೆರವಣಿಗೆ ಮಾಡಿಕೊಂಡು ಎಲ್ಲರ ಗಮನ ಸೆಳೆದಿದ್ದಾನೆ. ಹೌದು, ದ್ವಾರಕಾ ಜಿಲ್ಲೆಯ ಖಂಬಲಿಯಾದ ಕಾಥಿ ದೇವಲಿಯಾ ಗ್ರಾಮದ ವರ ಜೈಭದ್ರ ಸಿಂಗ್ ಬಹದ್ದೂರ್ ಸಿಂಗ್ ವಾಧೇರ್ ಹೆಲಿಕಾಪ್ಟರ್ ಮೂಲಕ ಮದುವೆ ಮೆರವಣಿಗೆ ಸಾಗಿ ಭಾವನಗರವನ್ನು ತಲುಪಿದ್ದಾರೆ.
ಕೇವಲ 1200 ಜನಸಂಖ್ಯೆಯನ್ನು ಹೊಂದಿರುವ ಕಾಥಿ ದೇವಲಿಯಾ ಗ್ರಾಮದಲ್ಲಿ ಈ ವಿಶೇಷ ಮದುವೆ ಮೆರವಣಿಗೆ ನೋಡಲು ಜನ ಸಾಗರವೇ ಹರಿದು ಬಂದಿತ್ತು. ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್ವೊಂದು ತಮ್ಮ ಗ್ರಾಮದಲ್ಲಿ ಇಳಿದಿರುವುದನ್ನು ಕಂಡ ಗ್ರಾಮಸ್ಥರು, ಹೆಲಿಕಾಪ್ಟರ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ಕಾಥಿ ದೇವಲಿಯಾದಿಂದ ತಮ್ಮ ಗ್ರಾಮದ ವರ ಹೆಲಿಕಾಪ್ಟರ್ ಮೂಲಕ ಮದುವೆ ಮೆರವಣಿಗೆ ಸಾಗಿದಾಗ ಗ್ರಾಮಸ್ಥರಲ್ಲಿ ಸಂಭ್ರಮ ಮನೆ ಮಾಡಿತ್ತು. 'ಮಗನ ಮದುವೆ ಮೆರವಣಿಗೆ ಹೆಲಿಕಾಪ್ಟರ್ ಮೂಲಕ ನಡೆಯುತ್ತದೆ ಎಂಬುದು ಕನಸಾಗಿತ್ತು, ಅದು ಈಗ ನೆರವೇರಿದೆ. ನಮ್ಮ ಕುಟುಂಬ ಮತ್ತು ಗ್ರಾಮಸ್ಥರು ತುಂಬಾ ಸಂತೋಷವಾಗಿದ್ದಾರೆ' ಎಂದು ವರನ ತಂದೆ ಹೇಳಿದ್ದಾರೆ.
ಇದನ್ನೂ ಓದಿ: ಮುಖೇಶ್ ಅಂಬಾನಿ ಮೊಮ್ಮಕ್ಕಳ ಬರ್ತ್ಡೇ ಪಾರ್ಟಿಯಲ್ಲಿ ಖ್ಯಾತ ಸೆಲೆಬ್ರಿಟಿಗಳು ಭಾಗಿ ವಿಡಿಯೋ