ಬಿಜೆಪಿಯದ್ದು ವಿಜಯ ಸಂಕಲ್ಪ ಯಾತ್ರೆಯಲ್ಲ, ಕ್ಷಮಾಪಣಾ ಯಾತ್ರೆ: ರಣದೀಪ್ ಸುರ್ಜೇವಾಲಾ
🎬 Watch Now: Feature Video
ಚಾಮರಾಜನಗರ: ಬಿಜೆಪಿ ರಾಜ್ಯದಲ್ಲಿ ಆರಂಭಿಸಿರುವುದು ವಿಜಯ ಸಂಕಲ್ಪ ಯಾತ್ರೆಯಲ್ಲ, ಅದು ರಾಜ್ಯದ ಜನರಿಗೆ ಕೇಳುತ್ತಿರುವ ಕ್ಷಮಾಪಣಾ ಯಾತ್ರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂಣದೀಪ್ ಸಿಂಗ್ ಸುರ್ಜೇವಾಲಾ ಟೀಕಿಸಿದರು. ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಭ್ರಷ್ಟಾಚಾರ ಮಿತಿ ಮೀರಿದ್ದು, ಬ್ರಾಂಡ್ ಕರ್ನಾಟಕ ಎಂಬುದನ್ನೇ ಹಾಳು ಮಾಡಿದ್ದಾರೆ. ಉದ್ಯೋಗ ನೇಮಕಾತಿಯಲ್ಲಿ ಹಗರಣ ಮಾಡಿ 40% ಕಮಿಷನ್ ಪಡೆದು ಈಗ ಹತಾಶೆ ಮನೋಭಾವದಿಂದ ಯಾತ್ರೆ ಆರಂಭಿಸಿದ್ದಾರೆ. ಇದು ಸಂಕಲ್ಪ ಯಾತ್ರೆಯಲ್ಲ, ಕ್ಷಮಾಪಣಾ ಯಾತ್ರೆ ಎಂದು ಕಿಡಿಕಾರಿದರು. ಜೊತೆಗೆ ಕಾಂಗ್ರೆಸ್ನ ಭರವಸೆಗಳು ಜನರ ಮನ ಮುಟ್ಟುತ್ತಿವೆ ಎಂದು ಸುರ್ಜೇವಾಲಾ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿಜಯ ಸಂಕಲ್ಪ ಯಾತ್ರೆಗೆ ಹಸಿರು ನಿಶಾನೆ ತೋರಿಸಿದ ಜೆ.ಪಿ ನಡ್ಡಾ