ಚಾಮರಾಜನಗರ: ಮೊಲ ನುಂಗಿ ಒದ್ದಾಡುತ್ತಿದ್ದ ಎರಡು ಹೆಬ್ಬಾವು ರಕ್ಷಣೆ- ವಿಡಿಯೋ - ಚಾಮರಾಜನಗರದಲ್ಲಿ ಹೆಬ್ಬಾವುಗಳ ರಕ್ಷಣೆ
🎬 Watch Now: Feature Video
Published : Oct 22, 2023, 4:04 PM IST
|Updated : Oct 22, 2023, 4:39 PM IST
ಚಾಮರಾಜನಗರ: ಕಬ್ಬಿನ ಗದ್ದೆಗಳಲ್ಲಿ ಬೃಹತ್ ಗಾತ್ರದ ಎರಡು ಹೆಬ್ಬಾವುಗಳು ಪತ್ತೆಯಾಗಿರುವ ಘಟನೆ ಭಾನುವಾರ ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಹಾಗೂ ಹೆಬ್ಬಸೂರು ಗ್ರಾಮದಲ್ಲಿ ನಡೆದಿದೆ. ಗದ್ದೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಮೊಲಗಳನ್ನು ನುಂಗಿ ಒದ್ದಾಡುತ್ತಿದ್ದ ಹಾವುಗಳನ್ನು ಕಂಡ ಕಾರ್ಮಿಕರು ಉರಗಪ್ರೇಮಿ ಸ್ನೇಕ್ ಚಾಂಪ್ ಅವರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಆಗಮಿಸಿದ ಅವರು ಹೆಬ್ಬಾವುಗಳನ್ನು ರಕ್ಷಣೆ ಮಾಡಿದ್ದಾರೆ. ಹೆಬ್ಬಸೂರು ಗ್ರಾಮದ ರಂಗಸ್ವಾಮಿ ಎಂಬವರ ಕಬ್ಬಿನ ಗದ್ದೆಯಲ್ಲಿದ್ದ ಹೆಬ್ಬಾವು 7.5 ಅಡಿ ಅಷ್ಟು ಉದ್ದವಿದ್ದರೆ, ಸಿದ್ದಯ್ಯನಪುರ ಗ್ರಾಮದ ಬಸವಣ್ಣ ಎಂಬವರ ಜಮೀನಿನಲ್ಲಿದ್ದ ಹೆಬ್ಬಾವು 10.5 ಅಡಿ ಉದ್ದವಿತ್ತು. ಬಿಳಿಗಿರಿರಂಗನ ಬೆಟ್ಟದ ಸುವರ್ಣಾವತಿ ನದಿಯ ಹಿನ್ನೀರಿನಲ್ಲಿ ಹಾವುಗಳನ್ನು ಬಿಡಲಾಗಿದೆ. ಈ ಹಿಂದೆ ರಾಜ್ಯದ ಮಲೆನಾಡಿನ ಜಿಲ್ಲೆಗಳಲ್ಲಿ ದೊಡ್ಡ ಗಾತ್ರದ ಹೆಬ್ಬಾವು, ಕಾಳಿಂಗ ಸರ್ಪಗಳು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಹಾಗು ಉರಗ ತಜ್ಞರು ಸ್ಥಳಕ್ಕೆ ಬಂದು ರಕ್ಷಿಸಿ ಕಾಡಿಗೆ ಬಿಟ್ಟಿದ್ದರು.
ಇದನ್ನೂ ಓದಿ: ಚಿಕ್ಕಮಗಳೂರು: ಕಾಫಿ ಎಸ್ಟೇಟ್ನಲ್ಲಿ ಭಯ ಹುಟ್ಟಿಸಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ - ವಿಡಿಯೋ