ETV Bharat / health

ಹಾಗಲಕಾಯಿ ಸೇವಿಸುವುದರಿಂದ ಮಧುಮೇಹ ನಿಯಂತ್ರಿಸಲು ಸಾಧ್ಯವಿದೆಯೇ?: ವೈದ್ಯರ ಸಲಹೆ ಹೀಗಿದೆ - BITTER MELON HEALTH BENEFITS

Bitter melon Health benefits: ನೀವು ಶುಗರ್​ ಪೇಷಂಟ್​ ಆಗಿದ್ದೀರಾ? ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವುದನ್ನು ತಡೆಯಲು ಯಾವ ಆಹಾರ ಸೇವಿಸಬೇಕು ಎಂದು ಯೋಚಿಸುತ್ತಿದ್ದೀರಾ? ನಿಮಗಾಗಿ ಆರೋಗ್ಯ ತಜ್ಞರು ಮಹತ್ವದ ಸಲಹೆಗಳನ್ನು ನೀಡಿದ್ದಾರೆ.

BITTER MELON AND DIABETES  BITTER GOURD FOR SUGAR PATIENTS  BITTER MELON USES SIDE EFFECTS  BITTER MELON HEALTH BENEFITS
ಸಾಂರ್ಭಿಕ ಚಿತ್ರ (FREEPIK)
author img

By ETV Bharat Health Team

Published : Jan 25, 2025, 11:08 AM IST

Bitter melon Health benefits: ಇಂದಿನ ಆಧುನಿಕ ಒತ್ತಡದ ಬದುಕಿನಲ್ಲಿ ಶುಗರ್​ ಪೇಷಂಟ್​ಗಳ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿದೆ. ಆರೋಗ್ಯ ಪ್ರಜ್ಞೆ ಇರುವವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ಅನುಸರಿಸುತ್ತಾರೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು.

ಆಹಾರ ಹಾಗೂ ಪಾನೀಯಗಳ ವಿಷಯದಲ್ಲಿ ಸಂಪೂರ್ಣವಾಗಿ ಗಮನ ಹರಿಸಬೇಕಾಗುತ್ತದೆ. ನಿಮ್ಮ ಆಹಾರ ಕ್ರಮಗಳ ಬಗ್ಗೆ ಕಾಳಜಿವಹಿಸಿದರೆ, ನಿಮ್ಮ ಶುಗರ್​ ನಿಯಂತ್ರಣದಲ್ಲಿ ಇರುತ್ತದೆ. ಆದರೆ, ಬಹುತೇಕರು ತಮ್ಮ ಕೆಲಸದ ಒತ್ತಡ ಮಧ್ಯೆ ತಮ್ಮ ಆರೋಗ್ಯ ಬಗ್ಗೆ ಕಾಳಜಿವಹಿಸಲು ಸಾಧ್ಯವಾಗುವುದಿಲ್ಲ. ಸಾಧ್ಯವಾದಷ್ಟು ಮಟ್ಟಿಗೆ ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ವಿಶೇಷವಾದ ಕಾಳಜಿ ವಹಿಸುವುದು ತುಂಬಾ ಮುಖ್ಯವಾಗಿದೆ.

ಗ್ಲೂಕೋಸ್ ಮಟ್ಟ ನಿಯಂತ್ರಿಸುತ್ತೆ: ಸಾಮಾನ್ಯವಾಗಿ ನಮ್ಮಲ್ಲಿರುವ ಹೆಚ್ಚಿನವರ ಮನಸ್ಸಿನಲ್ಲಿ ಒಂದು ಪ್ರಶ್ನೆ ಇದ್ದೆ ಇರುತ್ತದೆ. ಅದು ಏನೆಂದರೆ, ಹಾಗಲಕಾಯಿ ಸೇವನೆ ಮಾಡುವುದರಿಂದ ಮಧುಮೇಹ ನಿಯಂತ್ರಿಸಲು ಸಹಾಯವಾಗುತ್ತದೆಯೇ? ಈ ಕುರಿತಂತೆ ಕೆಲವು ಸಂಶೋಧನೆಗಳು ತಿಳಿಸುವ ಪ್ರಕಾರ, ಹಾಗಲಕಾಯಿ ಮಧುಮೇಹಿಗಳಿಗೆ ತುಂಬಾ ಉಪಯುಕ್ತವಾಗಿದೆ. ಹಾಗಲಕಾಯಿ ಸೇವಿಸುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ನಿಯಂತ್ರಿಸುತ್ತದೆ ಎಂದು ಸಂಶೋಧಕರು ತಿಳಿಸುತ್ತಾರೆ.

ಸಂಶೋಧನೆ ಏನು ತಿಳಿಸುತ್ತೆ?: ಎನ್​ಸಿಬಿಐಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಸಮತೋಲಿತ ಆಹಾರ ಸೇವಿಸಿವುದು ಅವಶ್ಯವಾಗಿದೆ. ಮಧುಮೇಹಿಗಳು ಹಾಗಲಕಾಯಿಯ ಜ್ಯೂಸ್​ ಕುಡಿಯಬಹುದು. ಆದರೆ, ಹುರಿದ ಹಾಗಲಕಾಯಿ ತಿನ್ನುವುದರಿಂದ ಯಾವುದೇ ಪ್ರಯೋಜನವಿಲ್ಲ. ಎಲ್ಲಾ ಪೋಷಕಾಂಶಗಳು ಕಳೆದುಹೋಗುತ್ತವೆ. ಸಾಧ್ಯವಾದಷ್ಟು ಬೇಯಿಸಿದ ಹಾಗಲಕಾಯಿ ತಿನ್ನಬಾರದು. ವೈದ್ಯರ ತಿಳಿಸುವ ಪ್ರಕಾರ, ಹಾಗಲಕಾಯಿ ಮಧುಮೇಹವನ್ನು ನಿಯಂತ್ರಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ವ್ಯಾಯಾಮ ಹಾಗೂ ವಾಕಿಂಗ್​ ಜೊತೆಗೆ ಸಮತೋಲಿತ ಆಹಾರ ಸೇವಿಸುವುದು ಅಗತ್ಯವಿದೆ.

ಹಾಗಲಕಾಯಿಯಲ್ಲಿದೆ ಫೈಬರ್, ವಿಟಮಿನ್ ಎ, ಸಿ: ಮಧುಮೇಹ ರೋಗಿಗಳು ಹಾಗಲಕಾಯಿಯನ್ನು ನಿಯಮಿತವಾಗಿ ಸೇವಿಸಿದರೆ ಉತ್ತಮ ಫಲಿತಾಂಶ ಲಭಿಸುತ್ತದೆ. ಹಾಗಲಕಾಯಿಯಿಂದ ಹಲವು ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ. ಹಾಗಲಕಾಯಿಯಲ್ಲಿ ಫೈಬರ್, ವಿಟಮಿನ್ ಎ, ಸಿ ಹಾಗೂ ಇತರ ಪೋಷಕಾಂಶಗಳು ಸಮೃದ್ಧವಾಗಿವೆ ಎಂದು ತಜ್ಞರು ತಿಳಿಸುತ್ತಾರೆ.

ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತೆ: ಹಾಗಲಕಾಯಿ ಕೂಡ ತೂಕ ಇಳಿಸಿಕೊಳ್ಳಲು ಪೂರಕವಾಗಿ ಕೆಲಸ ಮಾಡುತ್ತದೆ. ಜೊತೆಗೆ ಚರ್ಮ ಮತ್ತು ಕೂದಲಿಗೆ ಕೂಡ ಪ್ರಯೋಜನಕಾರಿಯಾಗಿದೆ. ಈ ತರಕಾರಿಯಲ್ಲಿ ವಿಟಮಿನ್ ಸಿ ಇದ್ದು, ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಹಾಗಲಕಾಯಿಯಲ್ಲಿ ಪಾಲಿಫಿನಾಲ್‌ಗಳು ಉರಿಯೂತ ಕಡಿಮೆ ಮಾಡುತ್ತದೆ. ಜೊತೆಗೆ ಉಸಿರಾಟದ ತೊಂದರೆಗಳು, ಯಕೃತ್ತಿನ ನಿರ್ವಿಶೀಕರಣಕ್ಕೂ ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ಗಳನ್ನು ವೀಕ್ಷಿಸಬಹುದು:

ಓದುಗರಿಗೆ ಮುಖ್ಯ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.