ETV Bharat / state

ಗರ್ಭ ಧರಿಸಿದ್ದ ಗೋ ವಧೆ ಪ್ರಕರಣ : ಓರ್ವ ಆರೋಪಿ ಬಂಧನ - COW SLAUGHTER CASE

ಗರ್ಭ ಧರಿಸಿದ್ದ ಗೋ ವಧೆ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ.

ಗೋ ವಧೆ ಪ್ರಕರಣ
ಗೋ ವಧೆ ಪ್ರಕರಣ (ETV Bharat)
author img

By ETV Bharat Karnataka Team

Published : Jan 25, 2025, 11:25 AM IST

ಕಾರವಾರ: ಹೊನ್ನಾವರ ತಾಲೂಕಿನ ಸಾಲ್ಕೋಡ್ ಗ್ರಾಮದ ಕೊಂಡಾಕುಳಿಯಲ್ಲಿ ಗರ್ಭ ಧರಿಸಿದ್ದ ಗೋ ಹತ್ಯೆ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹೊನ್ನಾವರ ತಾಲೂಕಿನ ವಲ್ಕಿಯ ತೌಫಿಕ್ ಅಹಮ್ಮದ್ ಜಿದ್ದಾ ಬಂಧಿತ ಆರೋಪಿ. ಕೊಂಡಾಕುಳಿಯಲ್ಲಿ ಇದೇ ಜನವರಿ 19 ರಂದು ಗೋವಿನ ಹತ್ಯೆ ನಡೆದಿತ್ತು. ಗರ್ಭ ಧರಿಸಿದ್ದ ಗೋವನ್ನು ಕೊಂದು ಕರುವನ್ನು ಸಹ ದುಷ್ಕರ್ಮಿಗಳು ಅಲ್ಲಿಯೇ ಬಿಸಾಡಿ ಹೋಗಿದ್ದರು‌. ಈ ಕೃತ್ಯ ಖಂಡಿಸಿ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು.

ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸರ್ಕಾರ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಾರಣ ಪೊಲೀಸ್ ಇಲಾಖೆಯು ಈ ಬಗ್ಗೆ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿತ್ತು. ಪ್ರಕರಣದ ತನಿಖೆ ಚುರುಕುಗೊಳಿಸಿರುವ ಖಾಕಿ ಪಡೆ, ಓರ್ವ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

ಗೋ ಹತ್ಯೆ ಕೃತ್ಯದಲ್ಲಿ ಸಹಕರಿಸಿದ ಮತ್ತು ತನ್ನ ಬೈಕ್ ಮೂಲಕ ಮಾಂಸ ಸಾಗಣೆಗೂ ಸಹಕರಿಸಿದ ಆರೋಪದ ಮೇಲೆ ಆರೋಪಿ ತೌಫಿಕ್ ಅಹಮ್ಮದ್‌ನನ್ನು ಬಂಧಿಸಲಾಗಿದ್ದು, ಇತರೆ ಆರೋಪಿಗಳ ಪತ್ತೆಗೆ ಶೋಧ ನಡೆದಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕ ನಗರದ ರಸ್ತೆ ಬದಿ ಶೆಡ್‌ನಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ ಅಮಾನವೀಯ ಘಟನೆ ನಡೆದ ಬೆನ್ನಲ್ಲೇ ಹೊನ್ನಾವರದಲ್ಲಿ ಗೋ ವಧೆ ಪ್ರಕರಣ ಬೆಳಕಿಗೆ ಬಂದಿತ್ತು.

ಪ್ರತ್ಯೇಕ ಪ್ರಕರಣದಲ್ಲಿ ಗೋ ಕಳ್ಳರ ಬಂಧನ : ದನಗಳ ಕಳ್ಳತನ ಮಾಡಿದ್ದ ಆರೋಪದ ಮೇಲೆ ಮೂವರು ಆರೋಪಿತರನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ. ಹೊನ್ನಾವರದ ಸಾಲ್ಕೋಡ್, ಕೊಂಡಾಕುಳಿ, ಹೊಸಾಕುಳಿ ಮತ್ತು ಕವಲಕ್ಕಿ ಭಾಗಗಳಲ್ಲಿ ದನಗಳ ಕಳ್ಳತನ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ 4 ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಹೊನ್ನಾವರ ಹೆರಂಗಡಿ ಅಪ್ಪಾರ್ ಕಾಲೋನಿ ಅಲ್ತಾಪ್ ಅಹಮ್ಮದ್ ಕಾಟಾಪುರುಸು, ಮತೀನ್ ಅಹಮ್ಮದ್ ಕಾಟಾಪುರುಸು, ಮಹಮ್ಮದ್ ಹುಸೇನ್ ಅಬ್ಬಾಸ ಕುರ್ವೇ ಬಂಧಿತ ಆರೋಪಿಗಳು. ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಸೂಚನೆಯಂತೆ ಹೊನ್ನಾವರ ಪೊಲೀಸ್ ಠಾಣೆ ಸಿಪಿಐ ಸಿದ್ದರಾಮೇಶ್ವರ, ಭಟ್ಕಳ ಗ್ರಾಮೀಣ ಠಾಣೆ ಸಿಪಿಐ ಎಸ್. ಸಂತೋಷ ಕಾಯ್ಕಿಣಿ, ಪಿಐ ಕುಮಟಾ ಯೋಗೇಶ ಕೆ. ಎಮ್ ನೇತೃತ್ವದಲ್ಲಿ ಹಾಗೂ ಹೊನ್ನಾವರ ಪೊಲೀಸ್ ಠಾಣೆಯ ಎಲ್ಲಾ ಪಿಎಸ್​​ಐ ಗಳನ್ನೊಳಗೊಂಡ ಮೂರು ತಂಡಗಳು ತುರ್ತು ಕಾರ್ಯಾಚರಣೆ ನಡೆಸಿದ್ದವು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹಸುಗಳ ಕೆಚ್ಚಲು ಕೊಯ್ದ ಪಾಪಿಗಳು! ರಸ್ತೆಯಲ್ಲಿ ರಕ್ತದೋಕುಳಿ, ಮೂಕಪ್ರಾಣಿಗಳ ನರಳಾಟಕ್ಕೆ ಸ್ಥಳೀಯರ ಕಣ್ಣೀರು

ಇದನ್ನೂ ಓದಿ: ಹಸು ಕೆಚ್ಚಲು ಕೊಯ್ದ ಪ್ರಕರಣ: ಮಾಲೀಕರ ಕುಟುಂಬಕ್ಕೆ ಮೂರು ಹಸುಗಳನ್ನ ಕೊಡಿಸಿದ ಜಮೀರ್ ಅಹಮದ್ ಖಾನ್

ಇದನ್ನೂ ಓದಿ: ಹಸು ಮಾಲೀಕನಿಗೆ 1 ಲಕ್ಷ ರೂ ಪರಿಹಾರ ಕೊಟ್ಟ ಆರ್.ಅಶೋಕ್‌: ಗೋ ಪೂಜೆ ನೆರವೇರಿಸಿದ ಬಿ.ವೈ. ವಿಜಯೇಂದ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.