45 ಕೆಜಿ ತೂಕದ ಆಡು ನುಂಗಲು ಹೆಬ್ಬಾವು ಹರಸಾಹಸ- ವಿಡಿಯೋ - ಬ್ರಾಂತಿಕಟ್ಟೆ ಕೊಡೆಂಕಿರಿ
🎬 Watch Now: Feature Video
ಕಡಬ (ದಕ್ಷಿಣ ಕನ್ನಡ): ಕಡಬ ತಾಲೂಕಿನ ಐತ್ತೂರು ಗ್ರಾಮದ ಬ್ರಾಂತಿಕಟ್ಟೆ ಕೊಡೆಂಕಿರಿ ಎಂಬಲ್ಲಿ ಭಾರಿ ಗಾತ್ರದ ಹೆಬ್ಬಾವೊಂದು ಆಡನ್ನು ನುಂಗಲು ಸುಮಾರು ಒಂದು ತಾಸು ಸೆಣಸಿ ವಿಫಲವಾಯಿತು. ಈ ಘಟನೆ ಮಂಗಳವಾರ ಸಂಜೆ ನಡೆದಿದೆ. ಸ್ಥಳೀಯ ಜಾರ್ಜ್‌ಕುಟ್ಟಿ ಎಂಬವರಿಗೆ ಸೇರಿದ ಸುಮಾರು 45 ಕೆಜಿ ತೂಕದ ಗಂಡು ಆಡೊಂದು ಹೆಬ್ಬಾವಿನ ಸೆರೆಗೆ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದೆ. ಆಡಿನ ತಲೆಯ ಭಾಗವನ್ನು ಹೆಬ್ಬಾವು ನುಂಗಿದರೂ ಉಳಿದ ಭಾಗವನ್ನು ನುಂಗಲು ಸಾಧ್ಯವಾಗದೆ ಸುಸ್ತಾಗಿ ಸತ್ತ ಆಡನ್ನು ಸ್ಥಳದಲ್ಲೇ ಬಿಟ್ಟು ಪೊದೆ ಸೇರಿದೆ.
ಕುರಿ ನುಂಗಲು ಯತ್ನಿಸಿದ ಹೆಬ್ಬಾವು : ಮೇಯುತ್ತಿದ್ದ ಕುರಿ ಮರಿಯೊಂದನ್ನು ನುಂಗಲು ಪ್ರಯತ್ನಿಸಿದ ಬೃಹತ್ ಗಾತ್ರದ ಹೆಬ್ಬಾವನ್ನು ಹಿಡಿದು ರಕ್ಷಿಸಿದ ಘಟನೆ ಮಂಡ್ಯ ಜಿಲ್ಲೆಯ ಶಿವಪುರ ಎಂಬಲ್ಲಿ ಇತ್ತೀಚೆಗೆ ನಡೆದಿತ್ತು. 20ಕ್ಕೂ ಹೆಚ್ಚು ಕುರಿಗಳನ್ನು ಮಾಲೀಕ ಮೇಯುಸುತ್ತಿದ್ದಾಗ ಅಲ್ಲಿಗೆ ಬಂದ ಹೆಬ್ಬಾವು ಮರಿಯೊಂದನ್ನು ನುಂಗಲು ಪ್ರಯತ್ನಿಸಿತ್ತು. ಅದನ್ನು ಕಂಡ ಮಾಲೀಕ ಕುರಿ ಮರಿಯ ರಕ್ಷಣೆಗಾಗಿ ಜೋರಾಗಿ ಬೊಬ್ಬೆ ಹಾಕಿದ್ದ. ಬೊಬ್ಬೆಗೆ ಹೆದರಿದ ಹಾವು ಕುರಿಯನ್ನು ಅಲ್ಲೇ ಬಿಟ್ಟು ಪೊದೆ ಸೇರಿದೆ. ಉರಗ ತಜ್ಞ ಹಾವು ಹಿಡಿದು, ರಕ್ಷಿಸಿ ಕಾಡಿಗೆ ಬಿಟ್ಟಿದ್ದರು.
ಇದನ್ನೂ ಓದಿ: Watch.. ಮುಂಗುಸಿಯಿಂದ ತಪ್ಪಿಸಿಕೊಂಡು ಮಗುವಿನ ತೊಟ್ಟಿಲಿಗೆ ನುಗ್ಗಿದ ಹಾವು: ಮೈ ಜುಂ ಎನಿಸುವ ವಿಡಿಯೋ