ಪಿಎಸ್ಐ ಕಾರು ಪಲ್ಟಿ, ಪ್ರಾಣಾಪಾಯದಿಂದ ಪಾರು: ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
🎬 Watch Now: Feature Video
Published : Dec 19, 2023, 2:57 PM IST
ದಾವಣಗೆರೆ: ಮಲೆಬೆನ್ನೂರು ಪೊಲೀಸ್ ಠಾಣೆಯ ಪಿಎಸ್ಐ ಪ್ರಭು ಕೆಳಗಿನಮನೆ ಅವರ ಕಾರು ಪಲ್ಟಿಯಾಗಿ ಭೀಕರ ಅಪಘಾತಕ್ಕೆ ಒಳಗಾಗಿರುವ ಘಟನೆ ಇತ್ತೀಚೆಗೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿತ್ತು.
ಈ ಭೀಕರ ಅಪಘಾತಕ್ಕೆ ಒಳಗಾದ ಹರಿಹರ ತಾಲೂಕಿನ ಮಲೆಬೆನ್ನೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್ಐ ಪ್ರಭು ಕೆಳಗಿನಮನೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಮ್ಮ ಸ್ವಗ್ರಾಮಕ್ಕೆ ಕಾರಿನಲ್ಲಿ ತೆರಳುವ ವೇಳೆ ರಸ್ತೆಯಲ್ಲಿ ಪಕ್ಷಿ ಅಡ್ಡ ಬಂದಿದೆ. ಆ ಪಕ್ಷಿಯನ್ನು ತಪ್ಪಿಸಲು ಹೋಗಿ ಪ್ರಭು ಅವರ ಕಾರು ಡಿವೈಡರ್ಗೆ ಅಪ್ಪಳಿಸಿದೆ. ಡಿವೈಡರ್ಗೆ ಕಾರು ಅಪ್ಪಳಿಸಿದ ರಭಸಕ್ಕೆ ಕಾರು ಎರಡು ಬಾರಿ ಪಲ್ಟಿ ಹೊಡೆದಿದೆ.
ಈ ವೇಳೆ, ಕಾರಿನಲ್ಲಿದ್ದ ಪಿಎಸ್ಐ ಪ್ರಭು ಕೆಳಗಿನಮನೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿರುವ ಕಾರು ಅಪಘಾತದ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎರಡು ಪಲ್ಟಿಯಾದ ನಂತರ ಕಾರು ಯಥಾಸ್ಥಿತಿಯಲ್ಲಿ ನಿಂತುಕೊಂಡಿತ್ತು. ಕಾರಿನಿಂದ ಪಿಎಸ್ಐ ಪ್ರಭು ಅವರು ಎದ್ದು ಹೊರಗೆ ಬಂದು ಜೀವ ಉಳಿಸಿಕೊಂಡಿದ್ದಾರೆ. ಸೀಟ್ ಬೆಲ್ಟ್ ಧರಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ.
ಇದನ್ನೂ ಓದಿ: ಆರೋಗ್ಯ ಇಲಾಖೆ, ಬಿಬಿಎಂಪಿ ಜೊತೆ ಸಭೆ ಬಳಿಕ ಹೊಷ ವರ್ಷಾಚರಣೆ ರೂಪುರೇಷೆ ಸಿದ್ಧ: ಬಿ ದಯಾನಂದ್