ಹುಬ್ಬಳ್ಳಿ: ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಮೇಯರ್ಗೆ ಖಾಲಿ ಕೊಡ ನೀಡಿ ಮನವಿ! - ಗಾಂಧಿವಾಡ ಸ್ಲಂ ಪ್ರದೇಶ
🎬 Watch Now: Feature Video
ಹುಬ್ಬಳ್ಳಿ: ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಹುಬ್ಬಳ್ಳಿ - ಧಾರವಾಡ ವಾರ್ಡ್ ನಂ. 59 ರ ಕಾಂಗ್ರೆಸ್ ಸದಸ್ಯೆ ಸುವರ್ಣ ಕಲ್ಲಕುಂಟ್ಲ ಅವರ ನೇತೃತ್ವದಲ್ಲಿ ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಯಿತು. ಈ ಕುರಿತು ಮಾತನಾಡಿದ ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ್ಲ, ವಾರ್ಡ್ ನಂ.59ರ ಗಾಂಧಿವಾಡ ಸ್ಲಂ ಪ್ರದೇಶದಲ್ಲಿ ಸುಮಾರು ವರ್ಷಗಳ ಹಿಂದೆ ಅಳವಡಿಸಿದ ಪೈಪ ಲೈನ್ ನಿಂದಾಗಿ ಕಲುಷಿತ ನೀರು ಕುಡಿಯುವ ನೀರಿನೊಂದಿಗೆ ಸೇರ್ಪಡೆಗೊಳ್ಳುತ್ತಿದ್ದು, ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು.
ಈ ಸಮಸ್ಯೆಯನ್ನು ಶೀಘ್ರವಾಗಿ ಸರಿಪಡಿಸಬೇಕು. ಇನ್ನೂ ಕೆಲ ಪ್ರದೇಶದಲ್ಲಿ ಕುಡಿಯುವ ನೀರಿನ ಸಂಪರ್ಕ ಸರಿಯಾಗಿ ಇದ್ದರೂ ಕೂಡಾ ಪೈಪ್ ಲೈನ್ ಸೋರಿಕೆಯಿಂದಾಗಿ ನೀರಿನ ಸಾಂದ್ರತೆ ಕಡಿಮೆ ಆಗುತ್ತದೆ ಎಂದರು. ಈ ವೇಳೆ ಮೇಯರ್ ಈರೇಶ ಅಂಚಟಗೇರಿ ಅವರಿಗೆ ಖಾಲಿ ಕೊಡ ನೀಡಿ ಕುಡಿಯುವ ನೀರು ಪೂರೈಸುವಂತೆ ಮನವಿ ಮಾಡಿದರು.
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಹೆಚ್ಚಿದ ಬೀದಿ ನಾಯಿಗಳ ಹಾವಳಿ: ಬಾಲಕರಿಬ್ಬರ ಮೇಲೆ ಗಂಭೀರ ದಾಳಿ