ವಿಶ್ವಕಪ್ ಫೈನಲ್ ಪಂದ್ಯ: ಭಾರತಕ್ಕೆ ಶುಭಕೋರಿದ ರಾಜಕೀಯ ನಾಯಕರು - etv bharat kannada
🎬 Watch Now: Feature Video
Published : Nov 18, 2023, 9:49 PM IST
ದಾವಣಗೆರೆ: ನಾಳೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಫೈನಲ್ ಕದನ ನಡೆಲಿದೆ. ಈ ಪಂದ್ಯಕ್ಕೆ ರಾಜಕೀಯ ನಾಯಕರು ಭಾರತ ತಂಡಕ್ಕೆ ಶುಭಕೋರಿದ್ದಾರೆ. ಮಾಜಿ ಸಚಿವರಾದ ಶ್ರೀ ರಾಮುಲು, ಎಂಪಿ ರೇಣುಕಾಚಾರ್ಯ, ಚಿತ್ರದುರ್ಗದ ಹಾಲಿ ಶಾಸಕ ವೀರೇಂದ್ರ ಪಪ್ಪಿ, ಬಿಜೆಪಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಶುಭ ಕೋರಿದ್ದಾರೆ. ಈ ವೇಳೆ ಮಾತನಾಡಿದ ಮಾಜಿ ಸಚಿವ ಶ್ರೀ ರಾಮುಲು, ಈ ಸಲ ಜಗತ್ತಿನ ಅತ್ಯಂತ ಮೆಚ್ಚಿನ ತಂಡ ಎಂದರೆ ಅದು ಟೀಮ್ ಇಂಡಿಯಾ. ಟೂರ್ನಿಯಲ್ಲಿ ಆಡಿದ 10 ಪಂದ್ಯಗಳನ್ನು ಜಯಿಸಿ ಭಾರತ ಫೈನಲ್ ಪ್ರವೇಶ ಮಾಡಿದೆ. ನಾಳೆ ನಡೆಯಲಿರುವ ವಿಶ್ವಕಪ್ ಪೈನಲ್ನಲ್ಲಿ ಇಂಡಿಯಾ ತಂಡ ಗೆದ್ದೇ ಗೆಲ್ಲುತ್ತದೆ ಎಂದು ಮಾಜಿ ಸಚಿವ ಶ್ರೀರಾಮಲು ದಾವಣಗೆರೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ರೇಣುಕಾಚಾರ್ಯ ಶುಭಹಾರೈಕೆ: ಫೈನಲ್ ಪಂದ್ಯಕ್ಕೆ ಎಂಪಿ ರೇಣುಕಾಚಾರ್ಯ ಅವರೂ ಶುಭಾಶಯ ಕೋರಿದರು. ಈ ವೇಳೆ, ಮಾತನಾಡಿದ ಅವರು, ಫೈನಲ್ ಪಂದ್ಯ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ವೀಕ್ಷಿಸಲು ಪ್ರಧಾನಿ ತೆರಳಲಿದ್ದಾರೆ. ಎಲ್ಲ ಪಂದ್ಯಗಳಲ್ಲಿ ಗೆದ್ದು ಬೀಗಿದ ತಂಡಕ್ಕೆ ಶುಭ ಹಾರೈಸುವೆ. ಅದ್ಭುತ ಆಟ ಆಡಿ ವಿಶ್ವ ಕಪ್ ತಂದುಕೊಡಲಿ ಎಂದು ಆಶಿಸುವೆ ಎಂದರು. ಈ ವೇಳೆ, ವರ್ಲ್ಡ್ ಕಪ್ ಫೈನಲ್ ಪಂದ್ಯಕ್ಕೆ ಶುಭ ಹಾರೈಸಿದ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ನಾಳೆಯ ಪಂದ್ಯದಲ್ಲಿ ನಮ್ಮ ಭಾರತ ಗೆದ್ದು ಬರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಆರ್.ಅಶೋಕ್: ನಾಳೆ ನಡೆಯಲಿರುವ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಗೆಲ್ಲಲಿದೆ ದೇಶದ ಜನತೆ ಭಾರತೀಯ ಕ್ರಿಕೆಟ್ ತಂಡದ ಜೊತೆಗಿದ್ದಾರೆ, ಆಸ್ಟ್ರೇಲಿಯಾ ವಿರುದ್ಧ ಗೆಲುವಿನ ಮೂಲಕ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವಂತಾಗಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಶುಭ ಕೋರಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಫೈನಲ್ನಲ್ಲಿ ಭಾರತಕ್ಕೆ ಗೆಲ್ಲುವ ಅವಕಾಶ ಹೆಚ್ಚು: ಅಂಡರ್ 19 ಕ್ರಿಕೆಟ್ ಆಟಗಾರ ಕನಿಷ್ಕ್ ವಿಶ್ವಾಸ