Watch... ಪ್ರತಿಭಟನಾ ನಿರತ ಸರಪಂಚ್​ಗಳ ಮೇಲೆ ಲಾಠಿ ಚಾರ್ಜ್​ - Etv Bharat Kannada

🎬 Watch Now: Feature Video

thumbnail

By

Published : Mar 1, 2023, 8:03 PM IST

ಪಂಚಕುಲ (ಹರಿಯಾಣ): ರಾಜ್ಯ ಸರ್ಕಾರ ಜಾರಿಗೆ ತಂದಿರುವ ಇ-ಟೆಂಡರ್​ ವಿರೋಧಿಸಿ ಹರಿಯಾಣದ ಸರಪಂಚ್‌ಗಳು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಪ್ರತಿಭಟನಾ ನಿರತ ಸರಪಂಚ್‌ಗಳನ್ನು ತಡೆದಿದ್ದಾರೆ. ಇನ್ನು ಅಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ತೆರೆಯಲು ಸರ್​ಪಂಚ್​ಗಳು ಪ್ರಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಸರಪಂಚ್‌ಗಳ ನಡುವೆ ವಾಗ್ವಾದ ನಡೆದಿದೆ. ನಂತರ ಸರಪಂಚ್​ಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಲಾಠಿ ಚಾರ್ಜ್​ ಮಾಡಿದ್ದಾರೆ ಎನ್ನಲಾಗಿದೆ.  

ಬೆಳಗ್ಗೆಯಿಂದಲೇ ಹರಿಯಾಣದ ಸರಪಂಚ್​ಗಳು ಪಂಚಕುಲ ಸೆಕ್ಟರ್ 5ರ ಶಾಲಿಮಾರ್ ಮೈದಾನದಲ್ಲಿ ಸೇರಲು ಪ್ರಾರಂಭಿಸಿದ್ದರು. ನಂತರ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಎಲ್ಲ ಸರಪಂಚ್​ಗಳು ಚಂಡೀಗಢಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇ-ಟೆಂಡರ್ ರದ್ದು, ಸರಪಂಚ್‌ಗಳಿಗೆ 30 ಸಾವಿರ ವೇತನ, ಪಂಚರಿಗೆ 5 ಸಾವಿರ ವೇತನ, ಪಿಂಚಣಿ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ  ಸರ್​ಪಂಚ್​ಗಳು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: 'ಪಕ್ಷದ ಉತ್ಸವವಾಗಿ ಕದಂಬೋತ್ಸವ': ಸಿಎಂ ಕಾರು ಅಡ್ಡಗಟ್ಟಿ ಕಾಂಗ್ರೆಸ್ ಪ್ರತಿಭಟನೆ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.