ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಂಜನಗೂಡು ಪಂಚಮಹಾರಥೋತ್ಸವ ವೈಭವ- ವಿಡಿಯೋ - ನೂರು ಅಡಿ ಎತ್ತರದ ಬೃಹತ್ ರಥ

🎬 Watch Now: Feature Video

thumbnail

By

Published : Apr 2, 2023, 1:01 PM IST

ಮೈಸೂರು: ನಂಜನಗೂಡಿನಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಪಂಚ ಮಹಾರಥೋತ್ಸವ ಅದ್ಧೂರಿಯಾಗಿ ಜರುಗಿತು. ಇಂದು ಬೆಳಗ್ಗೆ 6 ಗಂಟೆಯಿಂದ 6.40 ರ ವರೆಗಿನ ಶುಭ ಮೀನ ಲಗ್ನದಲ್ಲಿ ನೆರವೇರಿದ ಗೌತಮ ಪಂಚಮಹಾರಥೋತ್ಸವವನ್ನು ಭಕ್ತಗಣ ಕಣ್ತುಂಬಿಕೊಂಡಿತು. ನೂರು ಅಡಿ ಎತ್ತರದ ಬೃಹತ್ ರಥದ ಜೊತೆಗೆ ನಾಲ್ಕು ರಥಗಳು ಸಾಗುತ್ತಿದ್ದಂತೆ ಭಕ್ತರು ನಂಜುಂಡೇಶ್ವರನಿಗೆ ಜಯಕಾರ ಕೂಗಿ ಭಾವಪರವಶರಾದರು.

ನೂರಾರು ಟನ್ ತೂಕದ ನೂರು ಅಡಿ ಎತ್ತರದ ಬೃಹತ್ ರಥ ಸೇರಿದಂತೆ ಐದು ರಥಗಳನ್ನು ವಿಶೇಷವಾಗಿ ಬಣ್ಣ ಬಣ್ಣದ ಬಾವುಟ ಹಾಗೂ ಬಂಟಿಂಗ್ಸ್‌ಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು‌. ಮೊದಲು ಗಣಪತಿ ರಥೋತ್ಸವ ನಂತರ ಶ್ರೀ ನಂಜುಂಡೇಶ್ವರ ಸ್ವಾಮಿ ಗೌತಮ ಪಂಚ ಮಹಾರಥೋತ್ಸವ, ಪಾರ್ವತಿ ಅಮ್ಮನವರ ರಥೋತ್ಸವ, ಆ ಬಳಿಕ ಸುಬ್ರಹ್ಮಣ್ಯ ಹಾಗೂ ಚಂಡಿಕೇಶ್ವರ ಸ್ವಾಮಿಯವರ ಐದು ರಥಗಳು ಒಂದಾದ ನಂತರ ಒಂದರಂತೆ ರಥಬೀದಿಯಲ್ಲಿ ಸಾಗಿದವು. ದೇವಾಲಯದ ಪ್ರಧಾನ ಆಗಮಿಕ ನೀಲಕಂಠ ದೀಕ್ಷಿತ್ ನೇತೃತ್ವದಲ್ಲಿ ಪೂಜೆ ನಡೆಯಿತು.  

ಇದನ್ನೂ ಓದಿ : ಶ್ರೀ ಸಿದ್ಧೇಶ್ವರ ರಥೋತ್ಸವಕ್ಕೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚಣೆ: ವಿಡಿಯೋ

ರಥೋತ್ಸವಕ್ಕೆ ಬಂದಿದ್ದ ಲಕ್ಷಾಂತರ ಭಕ್ತರಿಗೆ ಜಿಲ್ಲಾ ಮತ್ತು ತಾಲೂಕು ಆಡಳಿತ ವತಿಯಿಂದ ಕುಡಿಯುವ ನೀರು, ಅನ್ನದಾಸೋಹ, ಸ್ವಚ್ಛತೆ, ತಾತ್ಕಾಲಿಕ ಶೌಚಾಲಯಗಳು, ಕಪಿಲಾ ನದಿ ತೀರದಲ್ಲಿ ಮಹಿಳೆಯರಿಗೆ ಬಟ್ಟೆ ಬದಲಾಯಿಸಲು ತಾತ್ಕಾಲಿಕ ಶೆಡ್​ಗಳ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯದ ನಾನಾ ಮೂಲೆಗಳಿಂದ ಭಕ್ತರು ಆಗಮಿಸಿ ದೇವಾಲಯದ ಸುತ್ತಮುತ್ತ ಹಾಗು ಮೊಗಸಾಲೆಯಲ್ಲಿ ಬೀಡು ಬಿಟ್ಟಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.