66ಕ್ಕೂ ಹೆಚ್ಚು ದೇಶಗಳು ಹಿಂದೂ ಧರ್ಮವನ್ನು ಗುರುತಿಸುವುದಿಲ್ಲ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ
🎬 Watch Now: Feature Video
ನವದೆಹಲಿ: ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಜಾತ್ಯತೀತ ನಿಲುವು ಹಿಂದೂ ಧರ್ಮವನ್ನು ಗುರುತಿಸದ ಜಗತ್ತಿನ ಅನೇಕ ದೇಶಗಳಿಗೊಂದು ಪಾಠ. ಸುಮಾರು 66ಕ್ಕೂ ಹೆಚ್ಚು ದೇಶಗಳು ಹಿಂದೂ ಧರ್ಮವನ್ನು ಗುರುತಿಸುವುದಿಲ್ಲ. ಹಿಂದೂವಾಗಿ ನನಗೂ ಈ ಬಗ್ಗೆ ಅಸಮಾಧಾನವಿದೆ ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಹೇಳಿದ್ದಾರೆ.
ಮಂಗಳವಾರ ಸಂಸತ್ ಲೈಬ್ರರಿ ಕಟ್ಟಡದ (PRIDE) ಮುಖ್ಯ ಉಪನ್ಯಾಸ ಸಭಾಂಗಣದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ (ಭಾರತದ ಸ್ವಾತಂತ್ರ್ಯದ 75 ವರ್ಷಗಳು) ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಕಾನೂನು ಮತ್ತು ಒಪ್ಪಂದಗಳ ವಿಭಾಗ) ಮತ್ತು ಪ್ರಜಾಪ್ರಭುತ್ವದ ಸಂಸದೀಯ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯು (PRIDE) 'ಭಾರತದ ಸಂವಿಧಾನದ ಏಳು ದಶಕಗಳು' ಕುರಿತು ವಿಚಾರ ಸಂಕಿರಣ ಆಯೋಜಿಸಿತ್ತು. ವಿಚಾರ ಸಂಕಿರಣವನ್ನು ಸಚಿವೆ ಲೇಖಿ ಉದ್ಘಾಟಿಸಿದ್ದರು.
ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ.ಅರುಣ್ ಮಿಶ್ರಾ ಮತ್ತು ನ್ಯಾ.ಆದರ್ಶ್ ಕುಮಾರ್ ಗೋಯೆಲ್ ಸೇರಿದಂತೆ ಗಣ್ಯ ಭಾಷಣಕಾರರು ಭಾಗಿಯಾಗಿದ್ದರು.
ಇದನ್ನೂ ಓದಿ: ಭ್ರಷ್ಟಾಚಾರದಲ್ಲಿ ತೊಡಗಿರುವವರು ಒಂದೇ ವೇದಿಕೆಗೆ ಬಂದರೆ, ಭ್ರಷ್ಟರ ವಿರುದ್ಧ ಕ್ರಮ: ಪ್ರಧಾನಿ ಮೋದಿ