ಲಾರಿ-ಬಸ್ ಮಧ್ಯೆ ಸಿಲುಕಿದ ಯುವತಿಯರು ಪವಾಡದಂತೆ ಪಾರು! ವಿಡಿಯೋ - ಬಸ್ ಓವರ್ಟೇಕ್ ಮಾಡಲು ಯತ್ನಿಸಿದಾಗ ಎದುರಿಗೆ ಟಿಪ್ಪರ್
🎬 Watch Now: Feature Video
ಕೋಯಿಕ್ಕೋಡ್ (ಕೇರಳ): ಓವರ್ಟೇಕ್ ಮಾಡುವ ಭರದಲ್ಲಿ ಎರಡು ವಾಹನಗಳ ಮಧ್ಯೆ ಸ್ಕೂಟರ್ ಸಿಲುಕಿ ಪವಾಡ ಸದೃಶ ರೀತಿಯಲ್ಲಿ ಇಬ್ಬರು ಯುವತಿಯರು ಅಪಾಯದಿಂದ ಪಾರಾದ ಘಟನೆ ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಬಸ್ ಓವರ್ಟೇಕ್ ಮಾಡಲು ಯತ್ನಿಸಿದಾಗ ಎದುರಿಗೆ ಟಿಪ್ಪರ್ ಲಾರಿ ಬಂದಿದೆ. ಏಕಾಏಕಿ ಸ್ಕೂಟರ್ನಲ್ಲಿದ್ದ ಯುವತಿಯರು ರಸ್ತೆಗೆ ಬಿದ್ದಿದ್ದಾರೆ. ಎದೆ ಝಲ್ ಎನಿಸುವ ದೃಶ್ಯಗಳು ಬಸ್‌ಗೆ ಅಳವಡಿಸಿದ್ದ ಕ್ಯಾಮರಾದಲ್ಲಿ ಸೆರೆಯಾಗಿವೆ.
ಮಾವೂರ್ನಲ್ಲಿ ಯುವತಿಯರು ಅರೀಕೋಡಿನಿಂದ ಬರುತ್ತಿದ್ದ ಬಸ್ ಹತ್ತಲೆಂದು ಸ್ಕೂಟರ್ನಲ್ಲಿ ಹಿಂಬಾಲಿಸುತ್ತಿದ್ದರು. ಬಸ್ ಓವರ್ ಟೇಕ್ ಮಾಡಲು ಯತ್ನಿಸುತ್ತಿದ್ದಾಗ ಎದುರಿಗೆ ಟಿಪ್ಪರ್ ಲಾರಿ ಬಂದಿದೆ. ಹಠಾತ್ ಆಗಿ ಬಸ್ ಹಾಗೂ ಲಾರಿಯ ಮಧ್ಯೆ ಯುವತಿಯರಿದ್ದ ಸ್ಕೂಟರ್ ಸಿಕ್ಕಿಹಾಕಿಕೊಂಡಿತು. ಅಲ್ಲದೇ, ಲಾರಿ ತಾಗಿ ಸ್ಕೂಟರ್‌ಸಮೇತವಾಗಿ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಹೆಲ್ಮೆಟ್‌ಗಳು ಕಳಚಿ ಬಿದ್ದಿವೆ. ಆದರೆ, ಪವಾಡ ಸದೃಶ ರೀತಿಯಲ್ಲಿ ಎಂಬಂತೆ ಯುವತಿಯರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಸೈಕಲ್ ಮೇಲೆ ತೆರಳುತ್ತಿದ್ದ 7 ವಿದ್ಯಾರ್ಥಿನಿಯರಿಗೆ ಗುದ್ದಿಕೊಂಡು ಹೋದ ಬೊಲೆರೋ - Video