ಗೋದಾಮುವಿನಲ್ಲಿ ಅಗ್ನಿ ಅವಘಡ .. ಗ್ಯಾಸ್ ಸಿಲಿಂಡರ್ಗಳು ಸ್ಫೋಟ, ಬೈಕ್ ಬಿಡಿಭಾಗಗಳು ಭಸ್ಮ - ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ
🎬 Watch Now: Feature Video
ಗುಜರಾತ್ನ ವಡೋದರಾದ ಹಲೋಲ್ ರಸ್ತೆಯಲ್ಲಿರುವ ಬೈಕ್ಗಳ ಬಿಡಿ ಭಾಗಗಳ ಗೋದಾಮುವಿಗೆ ಬೆಂಕಿ ಹೊತ್ತಿಕೊಂಡ ಘಟನೆ ಬೆಳಕಿಗೆ ಬಂದಿದೆ. ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಹೊತ್ತಿಕೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕೃಷ್ಣಾ ಆಶ್ರಯ್ ಕಂಪನಿಯ ಗೋದಾಮುವಿನಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಸಿಲಿಂಡರ್ಗಳು ಸ್ಫೋಟಗೊಂಡಿದ್ದು, ಬೆಂಕಿಯ ತೀವ್ರತೆ ಮತ್ತಷ್ಟು ಉಲ್ಬಣಗೊಂಡಿದೆ. ಬೆಂಕಿಯ ಘಟನೆಯ ನಂತರ, ವಡೋದರಾ ಅಗ್ನಿಶಾಮಕ ದಳದ ವಾಹನಗಳು ಬೆಂಕಿಯನ್ನು ಹತೋಟಿಗೆ ತಂದವು. ಮೋಟಾರ್ ಬೈಕ್ನ ಟೈರ್, ಬ್ಯಾಟರಿ, ಬಿಡಿ ಭಾಗಗಳು ಬೆಂಕಿಗಾಹುತಿಯಾದವು. ಬೆಂಕಿ ಹೊತ್ತಿಕೊಂಡ ಪರಿಣಾಮ ಸ್ಥಳದಿಂದ ಒಂದು ಕಿಲೋಮೀಟರ್ ದೂರದವರೆಗೆ ಜನರನ್ನು ನಿಲ್ಲಿಸಲಾಯಿತು. ವಾಹನಗಳ ಸಂಚಾರಕ್ಕೂ ತೊಂದರೆಯಾಗಿತ್ತು.
Last Updated : Feb 3, 2023, 8:28 PM IST