ರಕ್ಷಣಾ ಕಾರ್ಯದ ವೇಳೆ ಉರಗ ತಜ್ಞನಿಗೆ ಕಚ್ಚಿದ ಕೇರೆ ಹಾವು..! ವಿಡಿಯೋ
🎬 Watch Now: Feature Video
ಗದಗ: ಹಾವು ರಕ್ಷಣೆ ಮಾಡುವಾಗ ಉರಗ ತಜ್ಞರೊಬ್ಬರಿಗೆ ಕಚ್ಚಿದ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ. ಬುಡ್ನೇಸಾಬ್ ಸುರೇಬಾನ್ ಹಾವು ಕಚ್ಚಿಸಿಕೊಂಡಿರುವ ಉರಗ ತಜ್ಞ. ಗ್ರಾಮದ ರಾಘವೇಂದ್ರ ಮಠದ ಅಡುಗೆ ಮನೆಯಲ್ಲಿ ಹಾವು ಅವಿತು ಕುಳಿತಿತ್ತು. ಈ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಉರಗ ತಜ್ಞ ಬುಡ್ನೇಸಾಬ್ ಸುರೇಬಾನ್ ಅದನ್ನು ಹಿಡಿಯುವ ಪ್ರಯತ್ನ ಮಾಡುತ್ತಿದ್ದರು.
ರಕ್ಷಣೆ ಮಾಡುವಾಗ ಹಾವು ತಪ್ಪಿಸಿಕೊಳ್ಳಲು ಯತ್ನಿಸುತ್ತಿತ್ತು. ಸುಮಾರು 8 ಅಡಿಯಷ್ಟು ಉದ್ದವಿದ್ದ ಕೇರೆ ಹಾವು ರಕ್ಷಣೆ ಮಾಡುವ ವೇಳೆ ಬುಡ್ನೇಸಾಬ್ ಅವರಿಗೆ ಕಚ್ಚಿದೆ. ಬುಡ್ನೇಸಾಬ್ಗೆ ಸದ್ಯ ಚಿಕಿತ್ಸೆ ನೀಡಲಾಗಿದೆ. ಜೀವಕ್ಕೆ ಯಾವುದೇ ಅಪಾಯ ಇಲ್ಲ ಅಂತ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಹಾವು ರಕ್ಷಣೆ ವೇಳೆ ಅತೀ ವೇಗವಾಗಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತಿತ್ತು. ಆದ್ರೂ ಕೈಯಿಂದಲೇ ಹಾವು ರಕ್ಷಣೆ ಮಾಡುವಾಗ ಕೈಗೆ ಕಚ್ಚಿದೆ. ಕೇರೆ ಹಾವು ಕಚ್ಚಿದರೂ ಮನುಷ್ಯರು ಸಾಯೋದಿಲ್ಲ ಎಂದು ಬುಡ್ನೇಸಾಬ್ ಸುರೇಬಾನ್ ಹೇಳಿದ ಅವರು, ಹಾವು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟರು.
ಇದನ್ನೂ ಓದಿ: Bear attack: ಶಿಗ್ಗಾಂವಿ: ರೈತರ ಮೇಲೆ ಕರಡಿ ದಾಳಿ.. ಇಬ್ಬರಿಗೆ ಗಂಭೀರ ಗಾಯ