ETV Bharat / state

ಶಿವಮೊಗ್ಗ: ಜಿಲ್ಲೆಯ ಮೊದಲ ಡಿಜಿಟಲ್ ಅರೆಸ್ಟ್ ಪ್ರಕರಣ ಬೇಧಿಸಿದ ಸಿಇಎನ್ ಪೊಲೀಸರು - DIGITAL ARREST

ಶಿವಮೊಗ್ಗ ಜಿಲ್ಲೆಯ ಮೊದಲ ಡಿಜಿಟಲ್ ಅರೆಸ್ಟ್​ ಪ್ರಕರಣವನ್ನು ಸಿಇಎನ್ ಪೊಲೀಸರು ಭೇದಿಸಿ ಆರೋಪಿಗಳನ್ನ ಬಂಧಿಸಿದ್ದಾರೆ.

Accused
ಆರೋಪಿಗಳು (ETV Bharat)
author img

By ETV Bharat Karnataka Team

Published : Nov 15, 2024, 10:16 PM IST

ಶಿವಮೊಗ್ಗ: ನಗರದ ಗೋಪಾಳ ಬಡಾವಣೆಯ 72 ವರ್ಷದ ವ್ಯಕ್ತಿಗೆ ಸಿಬಿಐ ಅಧಿಕಾರಿ ಎಂದು ಪೋನ್ ಮಾಡಿ ಬೆದರಿಸಿ, ಡಿಜಿಟಲ್ ಅರೆಸ್ಟ್ ಮೂಲಕ ಒಟ್ಟು 41 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದ ಇಬ್ಬರು ನಕಲಿ ಸಿಬಿಐ ಅಧಿಕಾರಿಗಳನ್ನು ಶಿವಮೊಗ್ಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶ ರಾಜ್ಯದ ಮೊಹಮ್ಮದ್ ಅಹಮದ್(45) ಹಾಗೂ ಅಭಿಷೇಕ್ ಶೇಟ್ (27) ಬಂಧಿತರು. ಶಿವಮೊಗ್ಗದ ಗೋಪಾಳ ಬಡಾವಣೆಯ ಎಲ್. ಎಸ್ ಆನಂದ್ ಅವರಿಗೆ ಸೆಪ್ಟೆಂಬರ್​ ತಿಂಗಳಲ್ಲಿ ತಾನು ಸಿಬಿಐ ಅಧಿಕಾರಿ ಎಂದು ವಿಡಿಯೋ ಕಾಲ್ ಮಾಡಿ, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯಲ್ಲಿ ದೊಡ್ಡ ಮೊತ್ತದ ಹಣವು ಅಕ್ರಮವಾಗಿ ವರ್ಗಾವಣೆ ಆಗಿದೆ. ಇದರಿಂದ ನಿಮ್ಮ ಮೇಲೆ ದೂರು ದಾಖಲಾಗಿದೆ ಎಂದಿದ್ದಾರೆ.

ಇದರಿಂದ ನಿಮ್ಮನ್ನು ಅರೆಸ್ಟ್ ಮಾಡಲು ವಾರಂಟ್​​ ಜಾರಿ ಮಾಡಲಾಗಿದೆ. ನಿಮ್ಮ ಎಲ್ಲ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ. ನಮ್ಮ ಸಿಬ್ಬಂದಿ ಈಗ ಶಿವಮೊಗ್ಗ ಸಿಟಿ ಬಳಿಯೇ ಬರುತ್ತಿದ್ದು, ನಿಮ್ಮನ್ನು ಅರೆಸ್ಟ್ ಮಾಡಿ ಕರೆದುಕೊಂಡು ಬರುತ್ತಾರೆ. ನೀವು ಇದರಿಂದ ಬಚಾವ್ ಆಗಬೇಕಾದ್ರೆ, ನಾವು ಹೇಳಿದ ಖಾತೆಗೆ ಹಣವನ್ನು ವರ್ಗಾವಣೆ ಮಾಡಬೇಕು ಎಂದು ತಿಳಿಸಿ, ಒಟ್ಟು 41 ಲಕ್ಷ ರೂ. ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಸಿಕೊಂಡಿರುತ್ತಾರೆ.

ಈ ಕುರಿತು ಹಣ ಕಳೆದು‌ಕೊಂಡ ಆನಂದ್ ಅವರು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ 0111/24 ಕಲಂ 66 (ಡಿ) ಐಟಿ ಆ್ಯಕ್ಟ್ ಮತ್ತು 111_318 (4), 319 (2) ಬಿಎನ್​ಎಸ್ ರೀತ್ಯ ಪ್ರಕರಣವನ್ನು ದಾಖಲಿಸಿರುತ್ತಾರೆ.

ಪ್ರಕರಣ ದಾಖಲಿಸಿಕೊಂಡ ಸಿಇಎನ್​ನ ಡಿವೈಎಸ್​ಪಿ ಕೃಷ್ಣಮೂರ್ತಿ ಅವರು ಪಿಐ ಮಂಜುನಾಥ್ ಅವರ ನೇತೃತ್ವದಲ್ಲಿ ಎಎಸ್ಐ ಶೇಖರ್, ಸಿಬ್ಬಂದಿಗಳಾದ ವಿಜಯ್, ರವಿ, ಶರತ್ ಕುಮಾರ್ ಅವ​ರನ್ನು ಒಳಗೊಂಡ ತಂಡವನ್ನು ರಚನೆ ಮಾಡಿಕೊಂಡು ಇಬ್ಬರು ಆರೋಪಿಗಳನ್ನು ಉತ್ತರ ಪ್ರದೇಶಕ್ಕೆ ಹೋಗಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ಕರೆತಂದ ತಂಡಕ್ಕೆ ಎಸ್​ಪಿ ಮಿಥುನ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಹುಬ್ಬಳ್ಳಿ ಟೆಕ್ಕಿ 24 ಗಂಟೆ ಡಿಜಿಟಲ್‌ ಅರೆಸ್ಟ್: ₹ 81 ಲಕ್ಷ ದೋಚಿದ ವಂಚಕರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.