ETV Bharat / sports

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಚಾಂಪಿಯನ್ಸ್ ಟ್ರೋಫಿ ಪ್ರವಾಸಕ್ಕೆ ನಿಷೇಧ ಹೇರಿದ ಐಸಿಸಿ - NO CHAMPIONS TROPHY TOUR IN POK

ಪಿಒಕೆಯಲ್ಲಿ ರೋಡ್ ಶೋ ಮೂಲಕ ಚಾಂಪಿಯನ್ಸ್ ಟ್ರೋಫಿ ಪ್ರವಾಸ ಮಾಡದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಐಸಿಸಿ ನಿಷೇಧ ಹೇರಿದೆ.

ಚಾಂಪಿಯನ್ಸ್ ಟ್ರೋಫಿ
ಚಾಂಪಿಯನ್ಸ್ ಟ್ರೋಫಿ (Getty Images)
author img

By ETV Bharat Karnataka Team

Published : Nov 15, 2024, 10:49 PM IST

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ರೋಡ್ ಶೋ ಮೂಲಕ ಚಾಂಪಿಯನ್ಸ್ ಟ್ರೋಫಿ ಪ್ರವಾಸ ಮಾಡದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಷೇಧ ಹೇರಿದೆ.

ಪಾಕಿಸ್ತಾನದಲ್ಲಿ ಮುಂದಿನ ವರ್ಷ 2025 ರ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಐಸಿಸಿ ಚಾಂಪಿಯನ್‌ಶಿಪ್ ಟ್ರೋಫಿ ಪಂದ್ಯಗಳು ನಡೆಯಲಿವೆ. ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವುದರ ಬಗ್ಗೆ ಅನಿಶ್ಚಿತತೆ ಇದೆ. ಇದರ ನಡುವೆ ಐಸಿಸಿ ನಿರ್ಧಾರ ಮಹತ್ವ ಪಡೆದಿದೆ.

ಗುರುವಾರ, ಪಿಸಿಬಿ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿ, "ಸಿದ್ಧರಾಗಿ, ಪಾಕಿಸ್ತಾನ! ICC ಚಾಂಪಿಯನ್ಸ್ ಟ್ರೋಫಿ 2025 ಟ್ರೋಫಿ ಪ್ರವಾಸವು ಇಸ್ಲಾಮಾಬಾದ್‌ನಲ್ಲಿ ನವೆಂಬರ್ 16 ರಂದು ಪ್ರಾರಂಭವಾಗುತ್ತದೆ. ಸ್ಕರ್ಡು, ಮುರ್ರೆ, ಹುಂಜಾ ಮತ್ತು ಮುಜಫರಾಬಾದ್‌ನಂತಹ ರಮಣೀಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದೆ. 2017 ರಲ್ಲಿ ಸರ್ಫರಾಜ್ ಅಹ್ಮದ್ ಎತ್ತಿ ಹಿಡಿದಿದ್ದ ಟ್ರೋಫಿಯ ದೃಶ್ಯ ನೋಡಿ" ಎಂದಿದೆ.

ಸ್ಕರ್ಡು, ಮುರ್ರೆ, ಹುಂಜಾ ಮತ್ತು ಮುಜಫರಾಬಾದ್ ವಿವಾದಿತ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ನಲ್ಲಿರುವ ಸ್ಥಳಗಳಾಗಿವೆ. ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುತ್ತದೆಯೇ ಅಥವಾ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಂತಹ ತಟಸ್ಥ ಸ್ಥಳದಲ್ಲಿ ಪಂದ್ಯಗಳನ್ನು ಆಡಲಿದೆಯೇ ಎಂಬ ಬಗ್ಗೆ ಐಸಿಸಿ, ಬಿಸಿಸಿಐ ಮತ್ತು ಪಿಸಿಬಿ ನಡುವಿನ ಮಾತುಕತೆ ನಡೆಯುತ್ತಿರುವ ವೇಳೆ ಪಿಒಕೆಯಲ್ಲಿನ ಸ್ಥಳಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸುವ ಪಿಸಿಬಿಯ ಪ್ರಕಟಣೆ ವಿವಾದಕ್ಕಿಡಾಗಿದೆ. ಈಗ, ಪಿಸಿಬಿ ಪಿಒಕೆಯಲ್ಲಿ ಟ್ರೋಫಿ ರೋಡ್ ಶೋ ನಡೆಸದಂತೆ ಐಸಿಸಿ ನಿಷೇಧ ಹೇರಿರುವುದು ವಿಶ್ವ ಕ್ರಿಕೆಟ್​ನಲ್ಲಿ ಭಾರತದ ಹಿಡಿತ ಎಷ್ಟರ ಮಟ್ಟಿಗೆ ಇದೆ ಎಂದು ಗೊತ್ತಾಗುತ್ತದೆ.

ಕ್ರಿಕೆಟ್ ಜಗತ್ತಿನಲ್ಲಿ ಭಾರತದ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ: ಮನೋಹರ್ ಪರಿಕ್ಕರ್ ಇನ್ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಸ್ಟಡೀಸ್ ಅಂಡ್ ಅನಾಲಿಸಿಸ್​ ಅಸೋಸಿಯೇಟ್ ಫೆಲೋ ಮತ್ತು ಭೌಗೋಳಿ ರಾಜಕೀಯ ತಜ್ಞ ಆನಂದ್ ಕುಮಾರ್ ಅವರ ಪ್ರಕಾರ, "ಪಿಒಕೆ ಪ್ರದೇಶಗಳಲ್ಲಿ ಚಾಂಪಿಯನ್ಸ್ ಟ್ರೋಫಿ ರೋಡ್ ಶೋ ನಡೆಸದಂತೆ ಪಿಸಿಬಿಗೆ ಐಸಿಸಿ ನಿರ್ದೇಶನವು ಕ್ರಿಕೆಟ್ ಜಗತ್ತಿನಲ್ಲಿ ಭಾರತದ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ" ಎಂದಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿಯ ಪ್ರಕಾರ, ಪಾಕಿಸ್ತಾನವು ಭಾರತದ ಎಲ್ಲ ಪಂದ್ಯಗಳನ್ನು ಲಾಹೋರ್‌ನಲ್ಲಿ ಆಯೋಜಿಸಲು ಮುಂದಾಗಿದೆ. ಪಂದ್ಯಾವಳಿಯು ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿ ನಗರಗಳಲ್ಲಿ ನಡೆಯಲಿದೆ. ಭಾರತವು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ಜೊತೆಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದರೆ, ಬಿ ಗುಂಪಿನಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ಒಳಗೊಂಡಿದೆ.

ಭಾರತವು ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ಫೆಬ್ರವರಿ 20 ರಂದು ಬಾಂಗ್ಲಾದೇಶವನ್ನು, ಫೆಬ್ರವರಿ 23 ರಂದು ನ್ಯೂಜಿಲೆಂಡ್ ಮತ್ತು ಮಾರ್ಚ್ 1 ರಂದು ಪಾಕಿಸ್ತಾನದ ವಿರುದ್ಧ ಸೆಣೆಸಲಿದೆ. ಈ ಎಲ್ಲಾ ಪಂದ್ಯಗಳು ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿವೆ.

ICC ಚಾಂಪಿಯನ್ಸ್ ಟ್ರೋಫಿಯನ್ನು ಮೂಲತಃ ICC ನಾಕ್‌ಔಟ್ ಟ್ರೋಫಿ ಎಂದು ಹೆಸರಿಸಲಾಗಿದೆ, ಇದು ಚತುರ್ವಾರ್ಷಿಕ ಕ್ರಿಕೆಟ್ ಪಂದ್ಯಾವಳಿಯಾಗಿದೆ. 1998 ರಲ್ಲಿ ಉದ್ಘಾಟನೆಗೊಂಡ ICC ಚಾಂಪಿಯನ್ಸ್ ಟ್ರೋಫಿಯ ಕಲ್ಪನೆಯನ್ನು ಟೆಸ್ಟ್ ಆಡದ ದೇಶಗಳಲ್ಲಿ ಕ್ರಿಕೆಟ್​ ಅಭಿವೃದ್ಧಿಗೆ ಹಣವನ್ನು ಸಂಗ್ರಹಿಸಲು ಒಂದು ಸಣ್ಣ ಕ್ರಿಕೆಟ್ ಪಂದ್ಯಾವಳಿಯಾಗಿ ನಡೆಸಲಾಯಿತು.

ಇದನ್ನೂ ಓದಿ: ಚಾಂಪಿಯನ್ಸ್​ ಟ್ರೋಫಿಗೆ ಹೊಸ ಟ್ವಿಸ್ಟ್​: ಪಾಕ್​ ಹಿಂದೆ ಸರಿದರೆ ಭಾರತದ ಪಂದ್ಯಗಳು ಸ್ಥಳಾಂತರ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.