ETV Bharat / sports

ಸಂಜು ಸ್ಯಾಮ್ಸನ್ - ತಿಲಕ್ ವರ್ಮಾ ಅದ್ಭುತ ಶತಕ: ದಕ್ಷಿಣ ಆಫ್ರಿಕಾಕ್ಕೆ 284 ರನ್​ಗಳ​ ಬಿಗ್ ಟಾರ್ಗೆಟ್

ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಕೇವಲ 1 ವಿಕೆಟ್‌ ಕಳೆದುಕೊಂಡು 284 ರನ್‌ಗಳ ಬಿಗ್ ಟಾರ್ಗೆಟ್ ನೀಡಿದೆ.

ಟೀಂ ಇಂಡಿಯಾ
ಟೀಂ ಇಂಡಿಯಾ (AP)
author img

By ETV Bharat Karnataka Team

Published : 2 hours ago

ಜೊಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ): ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ಅದ್ಭುತ ಶತಕಗಳ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಕೇವಲ 1 ವಿಕೆಟ್‌ ಕಳೆದುಕೊಂಡ ಭರ್ಜರಿ 284 ರನ್‌ಗಳ ಬಿಗ್ ಟಾರ್ಗೆಟ್ ನೀಡಿದೆ.

ಆರಂಭಿಕ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ 8 ಸಿಕ್ಸರ್, 6 ಬೌಂಡರಿಗಳ ನೆರವಿನಿಂದ 51 ಎಸೆತಗಳಲ್ಲಿ ಶತಕ ಸಿಡಿಸಿದರು. ಇದು ಟಿ20 ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ ಸ್ಯಾಮ್ಸನ್ ಅವರ ಮೂರನೇ ಶತಕವಾಗಿದೆ. ಸಂಜು ಸ್ಯಾಮ್ಸನ್ ನಂತರ ತಿಲಕ್ ವರ್ಮಾ ಕೂಡ ಭರ್ಜರಿ ಬ್ಯಾಟಿಂಗ್ ನಡೆಸಿ ಶತಕ ಸಿಡಿಸಿದ್ದಾರೆ. ತಿಲಕ್ ಸತತ ಎರಡನೇ ಪಂದ್ಯದಲ್ಲಿ ಶತಕ ಬಾರಿಸಿದರು. ಅಜೇಯರಾಗಿ ಕ್ರೀಸ್‌ನಲ್ಲಿ ಉಳಿದ ತಿಲಕ್ ವರ್ಮಾ 120 ರನ್ ಸಿಡಿಸಿದ್ರೆ, ಸಂಜು ಸ್ಯಾಮ್ಸನ್ 109 ರನ್‌ ಬಾರಿಸಿದ್ದಾರೆ.

ಜೊಹಾನ್ಸ್‌ಬರ್ಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಿಕ್ಸರ್‌, ಬೌಂಡರಿಗಳ ಸುರಿಮಳೆಯೇ ಸುರಿಸಿದ ಭಾರತದ ಬ್ಯಾಟ್ಸಮನ್​ಗಳು ಅತ್ಯುತ್ತಮ ಪ್ರದರ್ಶನ ನೀಡಿದರು.

ಇದನ್ನೂ ಓದಿ: ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಚಾಂಪಿಯನ್ಸ್ ಟ್ರೋಫಿ ಪ್ರವಾಸಕ್ಕೆ ನಿಷೇಧ ಹೇರಿದ ಐಸಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.