ಬೆಂಗಳೂರು : ವಕ್ಫ್ ಆಸ್ತಿ ವಿವಾದ ವಿಚಾರವಾಗಿ ರಾಜ್ಯಾದ್ಯಂತ ಜಾಗೃತಿ ಅಭಿಯಾನ ನಡೆಸಲು ಬಿಜೆಪಿ ಮುಂದಾಗಿರುವ ಬೆನ್ನಲ್ಲೇ ಇದೀಗ ಮೂರು ತಂಡಗಳನ್ನು ರಚನೆ ಮಾಡಲಾಗಿದೆ. ಈ ಬಾರಿ ಅಸಮಾಧಾನಿತ ನಾಯಕರಿಗೂ ಸ್ಥಾನ ನೀಡಲಾಗಿದೆ.
ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ಸಂಬಂಧ ಎಲ್ಲ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ನೈಜ ವರದಿ ಸಂಗ್ರಹಕ್ಕೆ ‘ನಮ್ಮ ಭೂಮಿ - ನಮ್ಮ ಹಕ್ಕು' ಘೋಷವಾಕ್ಯದಡಿ ರಾಜ್ಯ ಬಿಜೆಪಿ ಮೂರು ತಂಡಗಳನ್ನ ರಚನೆ ಮಾಡಿದೆ. ಉಪ ಚುನಾವಣೆ ಸೇರಿದಂತೆ ಯಾವುದಕ್ಕೂ ರೆಬೆಲ್ ನಾಯಕರನ್ನು ಗಣನೆಗೆ ತೆಗೆದುಕೊಳ್ಳದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಅವರು ತಂಡದಲ್ಲಿ ಅವರಿಗೆ ಸ್ಥಾನ ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ನೇತೃತ್ವದ ತಂಡದಲ್ಲಿ ಶಾಸಕ ರಮೇಶ್ ಜಾರಕಿಹೊಳಿ, ಪ್ರತಿಪಕ್ಷದ ನಾಯಕ ಆರ್ ಅಶೋಕ್ ನೇತೃತ್ವದ ತಂಡದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಛಲವಾದಿ ನಾರಾಯಣಸ್ವಾಮಿ ನೇತೃತ್ವದ ತಂಡದಲ್ಲಿ ಮಾಜಿ ಸಂಸದ ಅರವಿಂದ ಲಿಂಬಾವಳಿಗೆ ಸ್ಥಾನ ನೀಡಲಾಗಿದೆ. ‘ನಮ್ಮ ಭೂಮಿ-ನಮ್ಮ ಹಕ್ಕು' ಘೋಷವಾಕ್ಯದಡಿ ರಚನೆಯಾಗಿರುವ ತಂಡ ಈ ಕೆಳಕಂಡಂತೆ ಇದೆ.
ಬಿ. ವೈ ವಿಜಯೇಂದ್ರ ನೇತೃತ್ವದ ತಂಡ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬೀದರ್ - ಜಗದೀಶ್ ಶೆಟ್ಟರ್, ಕಲಬುರಗಿ-ಭಗವಂತ ಖೂಬಾ, ಯಾದಗಿರಿ-ಡಾ. ಸಿ. ಎನ್. ಅಶ್ವಥ್ ನಾರಾಯಣ, ರಾಯಚೂರು- ಮುರುಗೇಶ್ ನಿರಾಣಿ, ಕೊಪ್ಪಳ- ಬಿ. ಶ್ರೀರಾಮುಲು, ಗದಗ- ರಮೇಶ್ ಜಾರಕಿಹೊಳಿ, ವಿಜಯಪುರ- ಈರಣ್ಣ ಕಡಾಡಿ, ಬಾಗಲಕೋಟೆ-ಹಾಲಪ್ಪ ಆಚಾರ್, ಸುನೀಲ್ ವಲ್ಯಾಪುರೆ, ಎಂ. ಬಿ ಜಿರಲಿ, ವಕೀಲರು, ಪಿ. ರಾಜೀವ್- ಸಂಚಾಲಕರು, ಅರುಣ್ ಶಹಾಪುರ, ಹರೀಶ್ ಪೂಂಜಾ, ಡಾ. ಶೈಲೇಂದ್ರ ಬೆಲ್ದಾಳೆ- ಸಂಯೋಜಕರು.
ಪ್ರತಿಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದ ತಂಡ : ಚಾಮರಾಜನಗರ - ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮೈಸೂರು ನಗರ/ ಗ್ರಾಮಾಂತರ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಂಡ್ಯ- ಬಸನಗೌಡ ಪಾಟೀಲ್ ಯತ್ನಾಳ್, ಹಾಸನ- ರಾಜೂಗೌಡ, ಕೊಡಗು-ಎಂ. ಪಿ ರೇಣುಕಾಚಾರ್ಯ, ದಕ್ಷಿಣ ಕನ್ನಡ- ಎನ್. ಮಹೇಶ್, ಉಡುಪಿ- ದೊಡ್ಡನಗೌಡ ಪಾಟೀಲ್, ಚಿಕ್ಕಮಗಳೂರು- ಭಾರತಿ ಶೆಟ್ಟಿ, ಶಿವಮೊಗ್ಗ- ಬಿ. ಸಿ ನವೀನ್ ಕುಮಾರ್, ಉತ್ತರ ಕನ್ನಡ- ವಸಂತಕುಮಾರ್, ವಕೀಲರು, ಸಂಚಾಲಕರು- ಜೆ. ಪ್ರೀತಂ ಗೌಡ, ಸಂಯೋಜಕರು ವಿನಯ್ ಬಿದರೆ, ಡಿ. ಎಸ್. ಅರುಣ್, ಲಕ್ಷ್ಮೀ ಅಶ್ವಿನ್ ಗೌಡ.
ಛಲವಾದಿ ನಾರಾಯಣಸ್ವಾಮಿ ನೇತೃತ್ವದ ತಂಡ : ರಾಮನಗರ- ಮಾಜಿ ಸಿಎಂ ಡಿ. ವಿ ಸದಾನಂದಗೌಡ, ಬೆಂಗಳೂರು ಗ್ರಾಮಾಂತರ ಕೇಂದ್ರ ಸಚಿವ ವಿ. ಸೋಮಣ್ಣ, ಕೋಲಾರ- ಸಿ. ಟಿ ರವಿ, ಚಿಕ್ಕಬಳ್ಳಾಪುರ- ನಳೀನ್ ಕುಮಾರ್ ಕಟೀಲ್, ತುಮಕೂರು- ಅರವಿಂದ ಲಿಂಬಾವಳಿ, ಮಧುಗಿರಿ- ಎಸ್. ಮುನಿಸ್ವಾಮಿ, ಚಿತ್ರದುರ್ಗ- ಆರಗ ಜ್ಞಾನೇಂದ್ರ, ದಾವಣಗೆರೆ- ಬಿ. ಸಿ ಪಾಟೀಲ್, ಹಾವೇರಿ- ವೈ. ಎ ನಾರಾಯಣಸ್ವಾಮಿ, ವಿವೇಕ್ ಸುಬ್ಬಾರೆಡ್ಡಿ, ವಕೀಲರು, ಸಂಚಾಲಕರು. ವಿ. ಸುನೀಲ್ ಕುಮಾರ್, ಸಂಯೋಜಕರು ಅಶ್ವಥ್ ನಾರಾಯಣ, ತಮ್ಮೇಶ್ಗೌಡ, ಹಾಗೂ ಅಂಬಿ ಹುಲಿನಾಯ್ಕರ್.
ಇದನ್ನೂ ಓದಿ : ವಕ್ಫ್ ಬೋರ್ಡ್ನಿಂದ ರೈತರ ಜಮೀನಿಗೆ ನೋಟಿಸ್ ಆರೋಪ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ