ಕಬ್ಬು ಕಡಿಯುವ ವೇಳೆ 5 ಚಿರತೆ ಮರಿಗಳು ಪತ್ತೆ.. ವಿಡಿಯೋ - ಈಟಿವಿ ಭಾರತ ಕನ್ನಡ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17438456-thumbnail-3x2-vny.jpg)
ಅಹ್ಮದ್ನಗರ (ಮಹಾರಾಷ್ಟ್ರ): ಅಹ್ಮದ್ನಗರ ಜಿಲ್ಲೆಯ ರಹತಾ ತಾಲೂಕಿನ ಹನುಮಂತಗಾಂವ್‌ನಲ್ಲಿ ಕೃಷ್ಣಾಜಿ ಜೇಜೂರ್ಕರ್ ಎಂಬುವವರಿಗೆ ಸೇರಿದ ಕಬ್ಬಿನ ಜಮೀನಿನಲ್ಲಿ 5 ಚಿರತೆ ಮರಿಗಳು ಪತ್ತೆಯಾಗಿವೆ. ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಮರಿಗಳು ಕೂಗು ಕೇಳಿ ಬಂದಿದೆ. ಬಳಿಕ ಏನೆಂದು ನೋಡಿದಾಗ ಚಿರತೆ ಮರಿಗಳು ಪತ್ತೆಯಾಗಿವೆ. ಕೂಡಲೇ ಕೃಷ್ಣಾಜಿ ಅವರು ವನ್ಯಜೀವಿ ತಜ್ಞ ವಿಕಾಸ್ ಮ್ಹಾಸ್ಕೆ ಎಂಬುವವರಿಗೆ ಸಂಪರ್ಕಿಸಿ ವಿಷವನ್ನು ತಿಳಿಸಿದ್ದಾರೆ. ಮ್ಹಾಸ್ಕೆ ಅವರು ಸ್ಥಳಕ್ಕೆ ಭೇಟಿ ನೀಡಿ ಮರಿಗಳನ್ನು ಪರಿಶೀಲಿಸಿದ್ದು, ಮರಿಗಳು ಇನ್ನೂ ಕಣ್ಣು ತೆರೆದಿಲ್ಲ. ಅವುಗಳು ಕಣ್ಣು ತೆರೆಯಲು ಎರಡರಿಂದ ನಾಲ್ಕು ದಿನಗಳು ಕಾಲ ಹಿಡಿಯುತ್ತದೆ ಎಂದು ಹೇಳಿದ್ದಾರೆ. ಬಳಿಕ ಮಾಸ್ಕೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯವನ್ನು ತಿಳಿಸಿದ್ದಾರೆ.
Last Updated : Feb 3, 2023, 8:38 PM IST