ಮನೆಯಂಗಳದಲ್ಲಿ ಚಿರತೆ; ಸಿದ್ಧಾಪುರದಲ್ಲಿ ಜನರ ಆತಂಕ- ಸಿಸಿಟಿವಿ ವಿಡಿಯೋ
🎬 Watch Now: Feature Video
ಶಿರಸಿ (ಉತ್ತರ ಕನ್ನಡ): ಜಿಲ್ಲೆಯ ಸಿದ್ದಾಪುರ ತಾಲೂಕಿನ ಸಂಪಗೋಡ ಗ್ರಾಮದ ಬೊಮ್ಮಜನಿಯಲ್ಲಿ ಚಿರತೆಯೊಂದು ರಾತ್ರಿ ಮನೆ ಅಂಗಳದವರೆಗೂ ನಿತ್ಯ ಬಂದು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳೆದ ಐದಾರು ದಿನಗಳಿಂದ ಬೊಮ್ಮಜನಿಯ ಎಂ.ಆರ್.ಹೆಗಡೆ ಅವರ ಮನೆ ಸುತ್ತಮುತ್ತ ಚಿರತೆ ಬಂದು ಹೋಗುತ್ತಿದೆ. ನಾಲ್ಕು ತಿಂಗಳ ಹಿಂದೆ ಇದೇ ಚಿರತೆ ಮನೆಯ ಒಂದು ನಾಯಿ ಹಾಗೂ ಎರಡು ಮರಿಗಳನ್ನು ಹೊತ್ತುಕೊಂಡು ಹೋಗಿರುವುದು ಕೂಡಾ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಈಗ ಪುನಃ ಮನೆಯ ಹತ್ತಿರ ಚಿರತೆ ಬರುತ್ತಿರುವುದರಿಂದ ಸುತ್ತಮುತ್ತಲಿನ ಜನತೆ ಆತಂಕಗೊಂಡಿದ್ದಾರೆ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇನ್ನು ಕೇವಲ ಸಿದ್ದಾಪುರ ಭಾಗದಲ್ಲಿ ಮಾತ್ರವಲ್ಲದೆ ಶಿರಸಿ ಭಾಗದಲ್ಲೂ ಚಿರತೆ ಕಾಣಿಸಿಕೊಂಡ ಪ್ರಕರಣಗಳು ದಾಖಲಾಗಿವೆ. ಆಹಾರ ಅರಸಿ ನಾಡಿಗೆ ಬರುವ ಚಿರತೆ ಜನರನ್ನು ಆತಂತಕ್ಕೀಡು ಮಾಡಿದೆ. ಇದಕ್ಕೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಇದನ್ನೂ ಓದಿ: ಕೆರೆಗೆ ಬಿದ್ದು ಒದ್ದಾಡುತ್ತಿದ್ದ ಕಾಡಾನೆ ರಕ್ಷಣೆ; ಇಲಾಖೆ ವಾಹನದ ಮೇಲೆ ಸಿಟ್ಟು- ವಿಡಿಯೋ