ETV Bharat / state

ಕಾರವಾರದಲ್ಲಿ ರಾಜ್ಯದ ಮೊದಲ ಕಡಲಜೀವಿ ಆರೈಕೆ ಕೇಂದ್ರ ; ಅರಣ್ಯ ಇಲಾಖೆಯಿಂದ 4 ಕೋಟಿ ವೆಚ್ಚದಲ್ಲಿ ನೀಲನಕ್ಷೆ - MARINE LIFE CARING CENTER

ಕಾರವಾರದಲ್ಲಿ ರಾಜ್ಯದಲ್ಲಿಯೇ ಮೊದಲ ಕಡಲಜೀವಿ ಆರೈಕೆ ಕೇಂದ್ರ ನಿರ್ಮಾಣಕ್ಕೆ ಇದೀಗ ಅರಣ್ಯ ಇಲಾಖೆ ₹ 4 ಕೋಟಿ ವೆಚ್ಚದಲ್ಲಿ ಯೋಜನೆ ರೂಪುರೇಷೆ ಸಿದ್ಧಪಡಿಸಿದೆ.

marine-life-caring-center-in-karwar
ರಾಜ್ಯದ ಮೊದಲ ಕಡಲಜೀವಿ ಆರೈಕೆ ಕೇಂದ್ರ (ETV Bharat)
author img

By ETV Bharat Karnataka Team

Published : Nov 9, 2024, 10:58 PM IST

ಕಾರವಾರ (ಉತ್ತರ ಕನ್ನಡ) : ಪ್ಲಾಸ್ಟಿಕ್ ತ್ಯಾಜ್ಯ ಸೇವನೆ, ಬಲೆಗೆ ಸಿಲುಕಿ ಇಲ್ಲವೆ ಇನ್ನಿತರ ಕಾರಣಗಳಿಂದ ಗಾಯಗೊಂಡು ಅದೇಷ್ಟೋ ಕಡಲಜೀವಿಗಳು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿದೆ. ಆದರೆ, ಇಂತಹ ಜೀವಿಗಳಿಗೆ ಆರೈಕೆ ಹಾಗೂ ಚಿಕಿತ್ಸೆ ನೀಡುವುದರ ಜೊತೆಗೆ ಅಧ್ಯಯನ ನಡೆಸಲು ಇದೀಗ ರಾಜ್ಯದಲ್ಲಿಯೇ ಮೊದಲಿಗೆ ಕಾರವಾರದ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಸುಮಾರು 4 ಕೋಟಿ ವೆಚ್ಚದಲ್ಲಿ ಕಡಲ ಜೀವಿಗಳ ಆರೈಕೆ ಹಾಗೂ ಪುನರ್‌ವಸತಿ ಕೇಂದ್ರ ನಿರ್ಮಾಣಕ್ಕೆ ಇದೀಗ ಅರಣ್ಯ ಇಲಾಖೆ ಯೋಜನೆ ರೂಪುರೇಷೆ ಸಿದ್ದಪಡಿಸಿದೆ.

ಯೋಜನೆಯು ರಾಜ್ಯದಲ್ಲಿಯೇ ಮೊದಲಾಗಿದ್ದು, ಉತ್ತರಕನ್ನಡದ 320 ಕಿ.ಮೀ, ಉಡುಪಿ ಜಿಲ್ಲೆಯ 95 ಕಿ.ಮೀ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 105 ಕಿ.ಮೀ ವ್ಯಾಪ್ತಿಯ ಕಡಲತೀರದ ಉದ್ದಕ್ಕೂ ಏಕೈಕ ಕೇಂದ್ರವಾಗಿರಲಿದೆ. ಸಮುದ್ರದಲ್ಲಿ ಗಾಯಗೊಂಡಿರುವ, ಇಲ್ಲವೇ ಮೃತಪಟ್ಟು ಸಮುದ್ರ ತೀರಗಳಲ್ಲಿ ಬಂದು ಬೀಳುವ ಆಮೆ, ತಿಮಿಂಗಲ, ಶಾರ್ಕ್ ಸೇರಿದಂತೆ ಇನ್ನಿತರ ಅಪರೂಪದ ಸಮುದ್ರ ಸಸ್ತನಿಗಳು ಇನ್ನಿತರ ಸಮುದ್ರ ಜೀವಿಗಳ ಅಧ್ಯಯನ, ಆರೈಕೆ ನಡೆಯಲಿದೆ.

ಡಿಎಫ್‌ಓ ಸಿ. ರವಿಶಂಕರ್ ಮಾತನಾಡಿದರು (ETV Bharat)

ಯೋಜನೆಗೆ ಕಾರವಾರದ ಕೋಡಿಭಾಗದ ಸುಮಾರು 10 ಎಕರೆ ವಿಸ್ತೀರ್ಣ ಹೊಂದಿರುವ ಸಾಲುಮರದ ಉದ್ಯಾನವನದಲ್ಲಿಯೇ ಒಂದು ಬದಿಯಲ್ಲಿ 1,400 ಸ್ಕ್ವೇರ್​ ಫೂಟ್ ಜಾಗವನ್ನು ಈಗಾಗಲೇ ಗುರುತು ಮಾಡಲಾಗಿದೆ. ಇದಕ್ಕೆ ಕೆ - ಶೋರ್ ಯೋಜನೆಯಡಿ ವಿಶ್ವಬ್ಯಾಂಕ್ ಅನುದಾನ ನೀಡಲಿದ್ದು, ಇದಕ್ಕಾಗಿ ಅರಣ್ಯ ಇಲಾಖೆ ಈಗಾಗಲೇ ಕ್ರಿಯಾ ಯೋಜನೆ ವರದಿಯನ್ನು ಕೆ- ಶೋರ್‌ಗೆ ಸಲ್ಲಿಸಿದೆ. ಇದೀಗ ಅಂತಿಮಗೊಂಡು ಗ್ರೀನ್‌ ಸಿಗ್ನಲ್ ಸಿಕ್ಕಿ ಕಾಮಗಾರಿ ಕೈಗೊಳ್ಳಲು ಸಿದ್ಧತೆ ನಡೆಸಿದೆ.

ಸಮುದ್ರ ತೀರ ಪ್ರದೇಶ ವ್ಯಾಪ್ತಿಯಲ್ಲಿ ಯೋಜನೆ ಆರಂಭ : ''ಜಿಲ್ಲೆಯ ಕಡಲತೀರದ ಹಲವು ಕಡೆಗಳಲ್ಲಿ ಕಡಲಾಮೆಗಳು ಮೊಟ್ಟೆಗಳನ್ನು ಇಡುತ್ತಿದ್ದು, ಈ ವೇಳೆ, ಆ ಮೊಟ್ಟೆಗಳ ಸಂರಕ್ಷಣೆಯೂ ಕಷ್ಟಕರವಾಗಿದೆ. ಅಲ್ಲದೇ ಆಮೆಗಳು ಹಲವು ಬಾರಿ ಗಾಯಗೊಂಡು ಸೂಕ್ತ ಚಿಕಿತ್ಸೆ ಇಲ್ಲದೆ ಸಾವನ್ನಪ್ಪಿದ ಘಟನೆಯೂ ನಡೆದಿದೆ. ಇನ್ನೊಂದೆಡೆ ಮೀನುಗಾರರ ಬಲೆಗೆ ಸಿಲುಕಿ ಗಾಯಗೊಂಡ ಡಾಲ್ಫಿನ್ ಅಥವಾ ಶಾರ್ಕ್​ನಂತಹ ಮೀನುಗಳಿಗೆ ಚಿಕಿತ್ಸೆ ಸಿಗದೇ ಸಾವನ್ನಪ್ಪುತ್ತಿದ್ದವು. ಅಂತಹವುಗಳನ್ನು ಪುನರ್ವಸತಿ ಕೇಂದ್ರಕ್ಕೆ ತಂದು ಸೂಕ್ತ ಚಿಕಿತ್ಸೆ ನೀಡುವುದರೊಂದಿಗೆ ಅವುಗಳ ಅಧ್ಯಯನಕ್ಕೂ ನೆರವಾಗಲಿದೆ. ಈ ಯೋಜನೆಗೆ ಸಮುದ್ರ ನೀರಿನ ಅವಶ್ಯಕತೆ ಇರುವುದರಿಂದ ಸಮುದ್ರ ತೀರ ಪ್ರದೇಶ ವ್ಯಾಪ್ತಿಯಲ್ಲೆ ಈ ಯೋಜನೆ ಆರಂಭವಾಗಲಿದೆ'' ಎಂದು ಕಾರವಾರ ಡಿಎಫ್‌ಓ, ಸಿ. ರವಿಶಂಕರ್ ಮಾಹಿತಿ ನೀಡಿದ್ದಾರೆ.

ಮೊದಲ ಹಂತವಾಗಿ ಜಿಲ್ಲೆಯ ಕಡಲ ತೀರದಲ್ಲಿ ಹೆಚ್ಚಾಗಿ ಕಂಡು ಬರುವ ಆಲಿವ್‌ರಿಡ್ಲೇ ಆಮೆಗಳ ಸಂರಕ್ಷಣೆಯ ಮೇಲೆ ಕೇಂದ್ರೀಕರಿಸಲು ನಿರ್ಧರಿಸಲಾಗಿದೆ. ಇದೀಗ ನವೆಂಬರ್ ತಿಂಗಳಿನಿಂದ ಮೇ ಅಂತ್ಯದವರೆಗೂ ಈ ಆಮೆಗಳು ತೀರದಲ್ಲಿ ಮೊಟ್ಟೆಗಳನ್ನು ಇಡುತ್ತಿದ್ದು, ಇವುಗಳನ್ನು ನಾಯಿ ಹಾಗೂ ಇನ್ನಿತರ ಪ್ರಾಣಿಗಳು ತಿಂದು ಹಾಕುವುದರಿಂದ ಅದರ ರಕ್ಷಣೆ ಮಾಡುವುದು ಸಹ ಆದ್ಯತೆಯನ್ನಾಗಿ ಅರಣ್ಯ ಇಲಾಖೆ ಈ ಯೋಜನೆ ರೂಪಿಸಿದೆ. ಇದಲ್ಲದೆ ಮೀನುಗಾರಿಕೆ ವೇಳೆ ಅಥವಾ ಇನ್ನಿತರ ಕಾರಣದಿಂದ ಗಾಯಗೊಂಡಂತಹ ಸಮುದ್ರ ಜೀವಿಗಳನ್ನು ಈ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ನೀಡಿ, ಮತ್ತೆ ಮೊದಲಿನಂತೆ ಆರೋಗ್ಯಪೂರ್ಣವಾದ ಬಳಿಕ ಮತ್ತೆ ಸಮುದ್ರಕ್ಕೆ ಬಿಡುವವರೆಗೂ ಆರೈಕೆ ಮಾಡಲಾಗುತ್ತದೆ ಎಂದಿದ್ದಾರೆ.

ಪ್ರವಾಸಿಗರಿಗೆ ಸಮುದ್ರ ಜೀವಿಗಳ ಪರಿಚಯ : ಇನ್ನು ಗಾಯಗೊಂಡಿರುವ ಮತ್ತು ಚೇತರಿಸಿಕೊಳ್ಳುತ್ತಿರುವ ಸಮುದ್ರ ಜೀವಿಗಳನ್ನು ಸಮುದ್ರಕ್ಕೆ ಬಿಡುವವರೆಗೂ ಕೇಂದ್ರದಲ್ಲೇ ಇಟ್ಟುಕೊಳ್ಳುವುದರಿಂದ ಅವುಗಳ ಬಗ್ಗೆ ಕೇವಲ ಅಧ್ಯಯನ ಮಾಡುವುದಲ್ಲದೇ, ಬರುವ ಪ್ರವಾಸಿಗರಿಗೂ ಮಾಹಿತಿ ನೀಡಲು ಇಲಾಖೆ ಯೋಜಿಸಿದೆ. ಆಮೆಗಳು ಮತ್ತು ಡಾಲ್ಫಿನ್, ಶಾರ್ಕ್​ಗಳಂತಹ ಅಪರೂಪದ ಸಮುದ್ರ ಜೀವಿಗಳನ್ನು ಜನರಿಗೆ ತೋರಿಸುವುದರ ಜೊತೆಗೆ ಮಾಲಿನ್ಯದಿಂದಾಗುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಸಹ ಇಲಾಖೆ ಹೊಂದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಕೇರಳ ಕರಾವಳಿಯಲ್ಲಿ 468 ಪ್ರಬೇಧದ ಜೀವಿಗಳು ಪತ್ತೆ; ಗಮನ ಸೆಳೆದ ಹೊಸ 7 ಜಾತಿಯ ಸಮುದ್ರ ಮೀನುಗಳು - CMFRI Rapid Survey

ETV Bharat Logo

Copyright © 2024 Ushodaya Enterprises Pvt. Ltd., All Rights Reserved.