ಶಿವಲಿಂಗಕ್ಕೆ ಜೀವಂತ ಏಡಿಗಳನ್ನು ಅರ್ಪಿಸುವ ಭಕ್ತರು.. ಕಾರಣ ಏನು ?

🎬 Watch Now: Feature Video

thumbnail

By

Published : Jan 19, 2023, 6:43 PM IST

Updated : Feb 3, 2023, 8:39 PM IST

ಸೂರತ್​ (ಗುಜರಾತ್​​) : ಭಕ್ತರು ಸಾಮಾನ್ಯವಾಗಿ ಹೂ ಹಣ್ಣು, ಫಲಪುಷ್ಪಗಳನ್ನು ಭಕ್ತಿ ಪೂರ್ವಕವಾಗಿ ದೇವರಿಗೆ ಅರ್ಪಿಸುತ್ತಾರೆ. ಆದರೆ  ಸೂರತ್​ನ ಉಮ್ರಾದಲ್ಲಿರುವ ರಾಮನಾಥ್​ ಘೇಲಾ ದೇವಾಲಯದ ಶಿವಲಿಂಗಕ್ಕೆ ಭಕ್ತರು ಏಡಿಗಳನ್ನು ಅರ್ಪಿಸುತ್ತಾರೆ. ಶ್ರಾವಣ ಶುಕ್ಲ ಏಕಾದಶಿಯಂದು ಇಲ್ಲಿನ  ಶಿವ ದೇವಾಲಯದಲ್ಲಿ ಪ್ರತಿ ವರ್ಷ ವಿಶೇಷ ಜಾತ್ರೆ ನಡೆಯುತ್ತದೆ. ಈ ಜಾತ್ರೆಯ ಸಂದರ್ಭದಲ್ಲಿ ಭಕ್ತರು ಶಿವಲಿಂಗಕ್ಕೆ ಏಡಿಗಳನ್ನು ಅರ್ಪಿಸುತ್ತಾರೆ. ಈ ಶಿವಲಿಂಗಕ್ಕೆ ಏಡಿಯನ್ನು ನೀಡಿದರೆ ಕಿವಿಗೆ ಸಂಬಂಧಿಸಿದ ರೋಗಗಳು ನಿವಾರಣೆ ಆಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.

ಇನ್ನು ರಾಮನು ವನವಾಸದ ಸಂದರ್ಭ ಇಲ್ಲಿಗೆ ಬಂದಿದ್ದನಂತೆ. ಇಲ್ಲಿ ನೆಲೆಸಿದ್ದ ವೇಳೆ ತನ್ನ ಬಿಲ್ಲಿನಿಂದ ಶಿವಲಿಂಗವನ್ನು ಮಾಡಿ ಅಲ್ಲಿಯೇ ಪೂಜಿಸಲು ಆರಂಭಿಸಿದ್ದಾರೆ. ಈ ಸಂದರ್ಭ ಶ್ರೀ ರಾಮನಿಗೆ ತನ್ನ ತಂದೆಯ ನಿಧನದ ಸುದ್ದಿ ಗೊತ್ತಾಗುತ್ತದೆ. ತಂದೆಗೆ ತರ್ಪಣ ಕೊಡುವ ಬಗ್ಗೆ ನಿರ್ಧರಿಸಿದಾಗ ಯಾವುದೇ ಬ್ರಾಹ್ಮಣ ಸಿಗುವುದಿಲ್ಲ. ಈ ವೇಳೆ ರಾಮನು ಸಮುದ್ರ ದೇವನನ್ನು ಬ್ರಾಹ್ಮಣನನ್ನಾಗಿ ಬರುವಂತೆ ವಿನಂತಿ ಮಾಡುತ್ತಾನೆ. 

ತರ್ಪಣ ಕೊಡುವ ಸಂದರ್ಭದಲ್ಲಿ ಬೃಹದಾಕಾರದ ಅಲೆಗಳು ಕಾಣಿಸಿಕೊಂಡು ಅಸಂಖ್ಯಾತ ಏಡಿಗಳು ಶಿವಲಿಂಗದ ಮೇಲೆ  ಬೀಳುತ್ತವೆ. ಆಗ ಸಮುದ್ರರಾಜನು ಈ ಏಡಿಗಳಿಗೆ ಹಾನಿ ಮಾಡದಂತೆ ರಾಮನಲ್ಲಿ ವಿನಂತಿ ಮಾಡುತ್ತಾನೆ. ಅಂತೆಯೇ ಈ ಏಡಿಗಳಿಗೆ ಉನ್ನತ ಸ್ಥಾನ ನೀಡುವ ಭರವಸೆಯನ್ನು ನೀಡುತ್ತಾನೆ. ಅಂದಿನಿಂದ ಏಡಿಯನ್ನು ದೇವಾಲಯಕ್ಕೆ ಅರ್ಪಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಇದನ್ನೂ ನೋಡಿ : ಹುಬ್ಬಳ್ಳಿಗೆ ಬರುತ್ತಿದ್ದಾಳೆ ಕೆಂಪು ಸುಂದರಿ: ಮೂರು ದಿನಗಳ ಭರ್ಜರಿ ಮೇಳ...!

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.