ETV Bharat / bharat

ದೆಹಲಿ ವಿಧಾನಸಭಾ ಚುನಾವಣಾ ಬಹಿರಂಗ ಪ್ರಚಾರ ಇಂದು ಅಂತ್ಯ; ಬುಧವಾರ ವೋಟಿಂಗ್​​ - ಯಾರತ್ತ ಮತದಾರನ ಒಲವು? - DELHI CAMPAIGNING ENDS TODAY

ಫೆ. 5ರಂದು ನಿಗದಿಯಾಗಿರುವ ದೆಹಲಿ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಸಭೆ ಇಂದು ಅಂತ್ಯವಾಗಲಿದೆ.

high-octane-campaigning-ends-today-ai-spoofs-roadshows-set-stage-for-feb-5-battle
ಚುನಾವಣಾ ಪ್ರಚಾರ (ಎಎನ್​ಐ)
author img

By ETV Bharat Karnataka Team

Published : Feb 3, 2025, 10:16 AM IST

ನವದೆಹಲಿ: ಹೈವೋಲ್ಟೇಜ್​ನ ದೆಹಲಿ ವಿಧಾನ ಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾಗಿದ್ದು, ಸಂಜೆ 5ರ ಬಳಿಕ ಮನೆ ಮನೆ ಪ್ರಚಾರ ಶುರುವಾಗಲಿದೆ. ಇನ್ನು ಫೆ. 5ರಂದು ಮತದಾನ ನಡೆಯಲಿದೆ.

ಅಂತಿಮ ಪ್ರಚಾರದ ದಿನವಾದ ಇಂದು ದೆಹಲಿಯಲ್ಲಿ ಬಿಜೆಪಿ 22 ರೋಡ್​ ಶೋ ಮತ್ತು ರ್‍ಯಾಲಿಗಳನ್ನು ಏರ್ಪಡಿಸಿದ್ದು, ಕಡೆಯ ಹಂತದಲ್ಲಿ ಮತದಾರರ ಸೆಳೆಯಲು ಇನ್ನಿಲ್ಲದ ಪ್ರಯತ್ನ ನಡೆಸಿದೆ. ಇತ್ತ ಆಮ್​ ಆದ್ಮಿ ಪಕ್ಷ ಕೂಡ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವ ಭರವಸೆಯಿಂದ ಚುನಾವಣಾ ಪ್ರಚಾರ ಮುಂದುವರೆಸಿದೆ. ಕಾಂಗ್ರೆಸ್​ ಕೂಡ ಹಿಂದೆ ಬೀಳದಂತೆ ಎಲೆಕ್ಷನ್​ ಸಮರದಲ್ಲಿ ಭಾಗವಹಿಸಿದೆ.

ಎಲ್ಲಾ ರಾಜಕೀಯ ಪಕ್ಷಗಳು ಎಲ್ಲಾ ಸಾರ್ವಜನಿಕ ಸಭೆಗಳು, ಚುನಾವಣಾ ಸಂಬಂಧಿತ ಕಾರ್ಯಗಳು ಮತ್ತು ಪ್ರಚಾರವನ್ನು ಮತದಾನಕ್ಕೆ 48 ಗಂಟೆಗಳ ಮುನ್ನವೇ ನಿಲ್ಲಿಸಬೇಕು ಎಂದು ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈಗಾಗಲೇ ಹಲವು ಮಾತಿನ ಯುದ್ಧ, ಆರೋಪ- ಪ್ರತ್ಯಾರೋಪಗಳ ಮೂಲಕ ಮತದಾರರ ಗಮನ ಸೆಳೆದಿರುವ ಪ್ರಮುಖ ಮೂರು ರಾಜಕೀಯ ಪಕ್ಷಗಳು ಹಲವು ಭರ್ಜರಿ ಘೋಷಣೆ ಮತ್ತು ಭರವಸೆಗಳನ್ನು ನೀಡಿದ್ದಾರೆ.

ದೆಹಲಿ ಮುಖ್ಯ ಚುನಾವಣಾ ಅಧಿಕಾರಿಗಳು ನೀಡಿರುವ ದತ್ತಾಂಶದ ಪ್ರಕಾರ, ಫೆ 5ರಂದು 13,766 ಮತಗಟ್ಟೆಗಳಲ್ಲಿ 1.56 ಕೋಟಿ ಜನರು ಮತ ಚಲಾಯಿಸಲಿದ್ದಾರೆ. ಇದರಲ್ಲಿ 83.76 ಲಕ್ಷ ಪುರುಷರಾದರೆ, 72.36 ಮಹಿಳಾ ಮತದಾರರಿದ್ದಾರೆ. 1,267 ತೃತೀಯ ಲಿಂಗಿಗಳು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಸರಾಗ ಮತದಾನ ಪ್ರಕ್ರಿಯೆಗೆ ವ್ಯವಸ್ಥೆ ಮಾಡಲಾಗಿದ್ದು, 733 ಮತಗಟ್ಟೆಗಳನ್ನು ವಿಕಲಚೇತನರಿಗೆ ವಿನ್ಯಾಸ ಮಾಡಲಾಗಿದೆ.

ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಮತದಾರರ ಸಮೂಹದ ನಿರ್ವಹಣೆಗೆ ಕ್ಯೂ ಮ್ಯಾನೇಜ್​ಮೆಂಟ್​ ಸಿಸ್ಟಂ ಪರಿಚಯಿಸಿದ್ದು, ಇದು ನೈಜ ಸಮಯದಲ್ಲಿನ ಜನ ಸಂದಣಿ ಪರಿಶೀಲಿಸಲು ಮತದಾರರಿಗೆ ಆ್ಯಪ್​ ಮೂಲಕ ಅವಕಾಶ ನೀಡಲಿದೆ.

ಈಗಾಗಲೇ ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತದಾನದ ಸೌಲಭ್ಯದಡಿ 6,980 ಜನರು ಈಗಾಗಲೇ ಮತ ಚಲಾಯಿಸಿದ್ದಾರೆ. ಜನವರಿ 24ರಿಂದ ಆರಂಭವಾದ ಈ ಸೇವೆ ಫೆಬ್ರವರಿ 4ರವರೆಗೆ ಮುಂದುವರಿಯಲಿದೆ.

ನ್ಯಾಯ ಸಮ್ಮತ ಮತ್ತು ಮುಕ್ತ ಚುನಾವಣೆಗಾಗಿ 220 ಪ್ಯಾರಾ ಮಿಲಿಟರಿ ಪಡೆ, 19,000 ಹೋಮ್​ ಗಾರ್ಡ್​ ಮತ್ತು 35,626 ದೆಹಲಿ ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೊತೆಗೆ 21,584 ಮತ ಘಟಕ, 20,692 ನಿಯಂತ್ರಿಕ ಘಟಕ, 18,943 ವಿವಿಪ್ಯಾಟ್​ಗಳನ್ನು ಸಿದ್ದ ಪಡಿಸಲಾಗಿದೆ.

ಫೆ 5ರಂದು ದೆಹಲಿ ವಿಧಾನಸಭಾ ಕ್ಷೇತ್ರದ ಮತದಾನ ನಡೆಯಲಿದ್ದು, ಫೆ 8ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರ ಬೀಳಲಿದೆ.

ಇದನ್ನೂ ಓದಿ: ಹೊಸ ತೆರಿಗೆ ಪದ್ಧತಿಯಿಂದ ಎಷ್ಟು ಕೋಟಿ ತೆರಿಗೆದಾರರಿಗೆ ಲಾಭ ಗೊತ್ತಾ? ಎಸ್​ಬಿಐ ವರದಿಯಲ್ಲಿದೆ ಮಾಹಿತಿ

ಇದನ್ನೂ ಓದಿ: ಈ ನಗರದಲ್ಲಿ ಡಿಸಿ - ಎಸ್​​​​​​ಪಿ ಪರ್ಯಟನೆ - 11 ಕಿಮೀ ಕಾಲ್ನಡಿಗೆ; ಯಾಕೆ ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.