ಕಂಬಿ ಹಿಂದಿನ ಕೋಗಿಲೆ.. ಸುಮಧುರ ಕಂಠದಿಂದ ಒಂದೇ ದಿನದಲ್ಲಿ ಪೊಲೀಸರ ಹೃದಯ ಗೆದ್ದ ಆರೋಪಿ - complained against me for singing obscene song
🎬 Watch Now: Feature Video
ಬಿಹಾರದ ಕೈಮೂರ್ ರಾಮಗಢ ಪೊಲೀಸ್ ಠಾಣೆ ಪೊಲೀಸರಿಂದ ಬಂಧಿತನಾದ ಆರೋಪಿ ದಹ್ರಾಕ್ ಗ್ರಾಮದ ನಿವಾಸಿ ಕನ್ಹಯ್ಯಾ ರಾಜ್ ಅವರು ತಮ್ಮನ್ನು ಬಂಧಿಸಿಟ್ಟಿದ್ದ ಕೊಠಡಿಯಲ್ಲಿ ಬೋಜ್ಪುರಿ ಹಾಡುಗಳನ್ನು ಹಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾಬುವಾ ರೋಡ್ ರೈಲು ನಿಲ್ದಾಣದಲ್ಲಿ ಪಾನಮತ್ತರಾಗಿದ್ದ ವೇಳೆ ಕನ್ಹಯ್ಯಾ ಅವರನ್ನು ಒಂದು ದಿನದ ಮಟ್ಟಿಗೆ ಪೊಲೀಸರು ವಶಕ್ಕೆ ಪಡೆದಿದ್ದರು. ಒಂದೇ ದಿನದಲ್ಲಿ ಅವರು ಠಾಣಾಧಿಕಾರಿಗಳಿಗೆ ಸಂಗೀತದ ರಸದೌತಣ ಉಣಬಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಕನ್ಹಯ್ಯಾ ಅವರು, 'ನಾನು ಅಶ್ಲೀಲ ಹಾಡುಗಳನ್ನು ಹಾಡುವುದಿಲ್ಲ. ನನಗೆ ಹಾಡಲು ಅನೇಕ ಆಫರ್‌ಗಳು ಈಗ ಬರಲಾರಂಭಿಸಿವೆ' ಎಂದು ತಿಳಿಸಿದ್ದಾರೆ.
Last Updated : Feb 3, 2023, 8:38 PM IST