ಗೂಂಡಾ ಕಾಯ್ದೆ ಅಡಿ ಬಂಧಿತನಾದ ಚೇತನ್ ಹಿರೇಕೆರೂರು ಮನೆಗೆ ಮಾಜಿ ಸಿಎಂ ಶೆಟ್ಟರ್ ಭೇಟಿ - Shettar visited to Chetana Hirekerur House
🎬 Watch Now: Feature Video
ಹುಬ್ಬಳ್ಳಿ: ಚುನಾವಣೆ ಘೋಷಣೆಯಾಗುತ್ತಿದಂತೆ ಪೊಲೀಸರು ಅಕ್ರಮ ಚಟುವಟಿಕೆ ಹಾಗೂ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವವರನ್ನು ಹುಡುಕಿ ಹುಡುಕಿ ಗಡಿಪಾರು ಮಾಡುತ್ತಿದ್ದಾರೆ. ಅದರಂತೆ ಮೊನ್ನೆ ಬಿಜೆಪಿ ಪಕ್ಷವನ್ನು ಬಿಟ್ಟು ಕಾಂಗ್ರೆಸ್ಗೆ ಸೇರ್ಪಡೆಗೊಂಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಭಾಗಿಯಾಗಿದ್ದ ಮಹಾನಗರ ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರು ಎಂಬವರನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಇಂದು ಚೇತನ್ ಹಿರೇಕೆರೂರು ಮನೆಗೆ ಮಾಜಿ ಸಿಎಂ ಶೆಟ್ಟರ್ ಭೇಟಿ ನೀಡಿ ಕುಟುಂಬದವರ ಅಳಲು ಆಲಿಸಿದರು. ಹುಬ್ಬಳ್ಳಿ ಕೋಟೆಲಿಂಗೇಶ್ವರ ನಗರದಲ್ಲಿರುವ ಚೇತನ್ ಮನೆಗೆ ಭೇಟಿ ನೀಡಿ ಮನೆಯವರೊಂದಿಗೆ ಚರ್ಚಿಸಿದರು.
ಜಗದೀಶ್ ಶೆಟ್ಟರ್ ನಾಮಪತ್ರ ಸಲ್ಲಿಕೆಯಲ್ಲಿ ಶೆಟ್ಟರ್ ಪಕ್ಕವೇ ಚೇತನ್ ಹಿರೇಕೆರೂರು ಇದ್ದದ್ದನ್ನು ಗಮನಿಸಬಹುದು. ಆದರೆ, ನಿನ್ನೆ ಚೇತನ್ ನನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಿದ್ದಾರೆ. ತಮ್ಮ ಆಪ್ತ ಚೇತನ್ ಬಂಧನವಾಗುತ್ತಲೇ ಚೇತನ್ ಮನೆಗೆ ಶೆಟ್ಟರ್ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಚರ್ಚಿಸಿ ನಿಮ್ಮ ಕುಟುಂಬದೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ.
ಇದನ್ನೂ ನೋಡಿ: ಸಿದ್ಧರಾಮಯ್ಯ ಅಭಿಮಾನಿಯಿಂದ ದೀಡ ನಮಸ್ಕಾರ: ವಿಡಿಯೋ.